ಸಿಎಂ ಎಂ.ಕೆ. ಸ್ಟಾಲಿನ್ ಮತ್ತು ರಾಜ್ಯಪಾಲ ಆರ್.ಎನ್. ರವಿ
ಚೆನ್ನೈ: ತಮಿಳುನಾಡು ಅಭಿವೃದ್ಧಿಯಾಗುತ್ತಿರುವುದನ್ನು ರಾಜ್ಯಪಾಲ ಆರ್.ಎನ್.ರವಿ ಅವರಿಗೆ ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ವಿಧಾನಸಭೆಯಲ್ಲಿ ಭಾಷಣ ಮಾಡದಿರುವ ಅವರ ನಿರ್ಧಾರ ‘ಬಾಲಿಶ’ವಾಗಿದೆ ಎಂದು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ತಿರುಗೇಟು ನೀಡಿದ್ದಾರೆ.
ರವಿ ಅವರು ರಾಜ್ಯಪಾಲರಾಗಿ ಅಧಿಕಾರ ವಹಿಸಿಕೊಂಡ ನಂತರ ಕಳೆದ ಕೆಲವು ವರ್ಷಗಳಿಂದ ರಾಜ್ಯ ವಿಧಾನಸಭೆ ವಿಚಿತ್ರ ಸನ್ನಿವೇಶಗಳಿಗೆ ಸಾಕ್ಷಿಯಾಗುತ್ತಿದೆ. ರಾಜ್ಯಪಾಲರು ವಿಧಾನಸಭೆಗೆ ಬರುತ್ತಾರೆ. ಆದರೆ, ಸದನವನ್ನು ಉದ್ದೇಶಿಸಿ ಮಾತನಾಡದೆ ವಾಪಸಾಗುತ್ತಾರೆ. ಆದ್ದರಿಂದಲೇ ಅವರ ಕ್ರಮಗಳು ಬಾಲಿಶ ಎಂದು ನಾನು ಹೇಳಿದ್ದೆ ಎಂದು ಸ್ಟಾಲಿನ್ ವಿಧಾನಸಭೆಯಲ್ಲಿ ತಿಳಿಸಿದ್ದಾರೆ.
ಸಂವಿಧಾನದ 176ನೇ ವಿಧಿಯ ಅನ್ವಯ, ರಾಜ್ಯಪಾಲರು ಅಧಿವೇಶನದ ಪ್ರಾರಂಭದಲ್ಲಿ ಶಾಸಕಾಂಗ ಸಭೆಯನ್ನು ಉದ್ದೇಶಿಸಿ ಭಾಷಣ ಮಾಡಬೇಕು. ಆದರೆ, ರವಿ ಅವರು ಪೂರ್ವಯೋಜಿತವಾಗಿ ನಿಯಮಗಳನ್ನು ಉಲ್ಲಂಘಿಸಲು ಉತ್ಸುಕರಾಗಿದ್ದಾರೆಂದು ತೋರುತ್ತಿದೆ ಎಂದು ಸ್ಟಾಲಿನ್ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.