ADVERTISEMENT

18 ವರ್ಷ ಮೇಲ್ಪಟ್ಟ ಮಕ್ಕಳನ್ನು ಸ್ವಲ್ಪಮಟ್ಟಿಗೆ ನಿಯಂತ್ರಿಸಬೇಕು: ಶ್ರದ್ಧಾ ತಂದೆ

ಆಫ್ತಾಬ್ ಗಲ್ಲಿಗೇರಿಸಿ, ಮನೆಯ ವಿಚಾರಣೆಗೆ ಒಳಪಡಿಸಬೇಕು

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 9 ಡಿಸೆಂಬರ್ 2022, 10:56 IST
Last Updated 9 ಡಿಸೆಂಬರ್ 2022, 10:56 IST
   

ನವದೆಹಲಿ: ಆರಂಭದಲ್ಲಿ ನನ್ನ ಮಗಳ ವಿಚಾರದಲ್ಲಿ ಪೊಲೀಸರಿಂದ ಯಾವುದೇ ಸಹಾಯ ಸಿಗಲಿಲ್ಲ ಎಂದು ಶ್ರದ್ಧಾ ವಾಲಕರ್ ಅವರ ತಂದೆ ವಿಕಾಸ್ ವಾಲಕರ್ ಹೇಳಿದ್ದಾರೆ.

ಹತ್ಯೆ ಪ್ರಕರಣ ಬೆಳಕಿಗೆ ಬಂದ ಬಳಿಕ ಇದೇ ಮೊದಲ ಬಾರಿಗೆ ಮಾಧ್ಯಮಗಳ ಜೊತೆ ಮಾಡಿದ ಅವರು, ‘ನನ್ನ ಮಗಳು ಬರ್ಬರವಾಗಿ ಹತ್ಯೆಯಾದಳು. ವಾಸೈ ಪೊಲೀಸ್ ಠಾಣೆಯ ಪೊಲೀಸರಿಂದಾಗಿ ನಾನು ಹಲವು ಸಮಸ್ಯೆಗಳನ್ನು ಎದುರಿಸಿದ್ದೇನೆ. ಅವರು ನನಗ ಸಹಾಯ ಮಾಡಿದ್ದಿದ್ದರೆ ನನ್ನ ಮಗಳು ಜೀವಂತವಾಗಿರುತ್ತಿದ್ದಳು’ಎಂದು ವಿಕಾಸ್ ವಾಲಕರ್ ಹೇಳಿದ್ದಾರೆ ಎಂದು ಎಎನ್‌ಐ ಟ್ವೀಟಿಸಿದೆ.

‘ನನ್ನ ಮಗಳನ್ನು ಕೊಂದ ಆಫ್ತಾಬ್ ಪೂನವಾಲನಿಗೆ ತಕ್ಕ ಪಾಠ ಕಲಿಸಬೇಕು. ಅವನನ್ನು ಗಲ್ಲಿಗೇರಿಸಬೇಕು. ಆಫ್ತಾಬ್ ಮನೆಯ ಸದಸ್ಯರು, ಸಂಬಂಧಿಕರು ಮತ್ತು ಈ ಪ್ರಕರಣಕ್ಕೆ ಸಂಬಂಧಪಟ್ಟ ಎಲ್ಲರನ್ನೂ ತನಿಖೆಗೆ ಒಳಪಡಿಸಬೇಕು’ಎಂದು ಹೇಳಿದರು.

'18 ವರ್ಷಕ್ಕಿಂತ ಮೇಲ್ಪಟ್ಟ ಮಕ್ಕಳನ್ನು ಸ್ವಲ್ಪಮಟ್ಟಿಗೆ ನಿಯಂತ್ರಿಸಬೇಕು. ನನಗೆ ಬಂದಿರುವ ಪರಿಸ್ಥಿತಿ ಬೇರೆ ಯಾರಿಗೂ ಬರಬಾರದು’ಎಂದು ವಾಲಕರ್ ಹೇಳಿದರು.

ADVERTISEMENT

ಶ್ರದ್ಧಾ–ಆಫ್ತಾಬ್ ಪರಿಚಯವಾಗಲು ಡೇಟಿಂಗ್ ಆ್ಯಪ್ ಕಾರಣ. ಮನೆ ಬಿಟ್ಟು ಬರುವಂತೆ ಆಫ್ತಾಬ್, ಶ್ರದ್ಧಾಳ ತಲೆಕೆಡಿಸಿದ್ದ ಎಂದು ಅವರು ಹೇಳಿದ್ಧಾರೆ.

2021ರಲ್ಲಿ ನಾನು ನನ್ನ ಮಗಳ ಜೊತೆ ಕಡೆಯ ಬಾರಿ ಮಾತನಾಡಿದ್ದೆ. ನೀನು ಎಲ್ಲಿದ್ದೀಯಾ? ಎಂದು ಕೇಳಿದಾಗ, ಬೆಂಗಳೂರಿನಲ್ಲಿ ಎಂದು ಹೇಳಿದ್ದಳು. ಅದಾದ ಬಳಿಕ, ಹಲವು ಬಾರಿ ಮಗಳ ಜೊತೆ ಮಾತನಾಡಲು ಪ್ರಯತ್ನಿಸಿದ್ದೇನೆ. ಆದರೆ, ಅವಳು ನನಗೆ ಅವಕಾಶ ನೀಡಲಿಲ್ಲ. ಸೆಪ್ಟೆಂಬರ್ 26ರಂದು ಆಫ್ತಾಬ್ ಬಳಿ ನನ್ನ ಮಗಳ ಬಗ್ಗೆ ಕೇಳಿದ್ದೆ. ಆದರೆ, ಅವನಿಂದ ಯಾವುದೇ ಉತ್ತರ ಬಂದಿರಲಿಲ್ಲ ಎಂದು ವಾಲಕರ್ ನೋವು ತೋಡಿಕೊಂಡಿದ್ದಾರೆ.

ಇದಕ್ಕೂ ಮುನ್ನ, ಬೆಳಿಗ್ಗೆ ಮಹಾರಾಷ್ಟ್ರದ ಉಪ ಮುಖ್ಯಮಂತ್ರಿ ದೇವೇಂದ್ರ ಫಡಣವೀಸ್ ಅವರನ್ನು ಭೇಟಿಯಾಗಿದ್ದ ವಿಕಾಸ್ ವಾಲಕರ್, ತಮ್ಮ ಮಗಳ ವಿಚಾರದಲ್ಲಿ ಸ್ಪಂದಿಸದ ಪೊಲೀಸರ ವಿರುದ್ಧ ದೂರಿದ್ಧಾರೆ.

ಮೇ 18ರಂದು ದಕ್ಷಿಣ ದೆಹಲಿಯ ಮೆಹ್ರೌಲಿಯ ಮನೆಯಲ್ಲಿ ಪ್ರೇಯಸಿ ಶ್ರದ್ಧಾ ವಾಲ್ಕರ್‌ ಅವರನ್ನು ಕತ್ತುಸೀಳಿ ಕೊಂದಿದ್ದ ಆಫ್ತಾಬ್ ಪೂನವಾಲ, ಆಕೆಯ ದೇಹವನ್ನು ಸುಮಾರು 35 ಭಾಗಗಳಾಗಿ ಕತ್ತರಿಸಿ ಮೂರು ವಾರಗಳ ಕಾಲ ಫ್ರಿಡ್ಜ್‌ನಲ್ಲಿಟ್ಟಿದ್ದ. ಬಳಿಕ ನಗರದ ವಿವಿಧೆಡೆ ಎಸೆದಿದ್ದ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.