ADVERTISEMENT

20 ರಾಷ್ಟ್ರಗಳಿಂದ ಲಸಿಕೆಗೆ ಬೇಡಿಕೆ: ಆರೋಗ್ಯ ಸಚಿವ

ಪಿಟಿಐ
Published 5 ಫೆಬ್ರುವರಿ 2021, 15:00 IST
Last Updated 5 ಫೆಬ್ರುವರಿ 2021, 15:00 IST
ಕೇಂದ್ರ ಆರೋಗ್ಯ ಸಚಿವ ಹರ್ಷವರ್ಧನ್‌
ಕೇಂದ್ರ ಆರೋಗ್ಯ ಸಚಿವ ಹರ್ಷವರ್ಧನ್‌   

ನವದೆಹಲಿ: ವಿಶ್ವದ 20 ರಾಷ್ಟ್ರಗಳು ಕೋವಿಡ್‌ ಲಸಿಕೆಗಾಗಿ ಭಾರತದ ಬಳಿ ಮನವಿ ಮಾಡಿವೆ. ಈ ಪೈಕಿ 15 ರಾಷ್ಟ್ರಗಳಿಗೆ ಲಸಿಕೆ ಪೂರೈಕೆ ಮಾಡಲಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವ ಹರ್ಷವರ್ಧನ್‌ ತಿಳಿಸಿದ್ದಾರೆ.

ದೇಶದಲ್ಲಿ ನಡೆಯುತ್ತಿರುವ ಲಸಿಕೆ ಅಭಿಯಾನ ಕುರಿತು ಲೋಕಸಭೆಯ ಪ್ರಶ್ನೋತ್ತರ ಅವಧಿಯಲ್ಲಿ ಕೇಳಲಾದ ಪ್ರಶ್ನೆಗಳಿಗೆ ಅವರು ಉತ್ತರ ನೀಡಿದರು.

'ಅಫ್ಘಾನಿಸ್ತಾನ, ಅಲ್ಜೀರಿಯ, ಬಾಂಗ್ಲಾದೇಶ, ಭೂತಾನ್‌, ಬ್ರೆಜಿಲ್‌, ಈಜಿಪ್ಟ್‌, ಕುವೈತ್‌, ಮಾಲ್ಡೀವ್ಸ್‌, ಮಾರಿಷಸ್‌, ಮಾರೊಕ್ಕೊ, ಮಂಗೋಲಿಯಾ, ಮಯನ್ಮಾರ್‌, ನೇಪಾಳ, ನಿಕರಗುವಾ, ಒಮನ್‌, ಸೌದಿ ಅರೇಬಿಯಾ, ಸೀಶೆಲ್ಸ್, ದಕ್ಷಿಣ ಆಫ್ರಿಕಾ, ಯುಎಇ ಸೇರಿದಂತೆ ವಿಶ್ವದ 22 ರಾಷ್ಟ್ರಗಳು ಲಸಿಕೆಗಾಗಿ ಭಾರತಕ್ಕೆ ಮನವಿ ಮಾಡಿವೆ. ಇದರ ಜೊತೆಗೆ ಪೆಸಿಫಿಕ್‌ ದ್ವೀಪ ರಾಷ್ಟ್ರಗಳಿಂದಲೂ ಮನವಿ ಬಂದಿದೆ,' ಎಂದು ಹರ್ಷವರ್ಧನ ಹೇಳಿದರು.

ADVERTISEMENT

ನೆರವು ಮತ್ತು ಒಪ್ಪಂದದ ರೂಪದಲ್ಲಿ ಈಗಾಗಲೇ 15 ರಾಷ್ಟ್ರಗಳಿಗೆ ಲಸಿಕೆಯನ್ನು ನೀಡಲಾಗಿದೆ. ನೆರವಿನ ರೂಪದಲ್ಲಿ 56 ಲಕ್ಷ ಡೋಸ್‌ಗಳು ಮತ್ತು ಒಪ್ಪಂದದ ರೂಪದಲ್ಲಿ 5 ಲಕ್ಷ ಡೋಸ್‌ಗಳನ್ನು ನೀಡಲಾಗಿದೆ ಎಂದೂ ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.