ನವದೆಹಲಿ: ಬೊಜ್ಜು ಹಾಗೂ ಸಾಂಕ್ರಾಮಿಕವಲ್ಲದ ರೋಗಗಳನ್ನು ನಿಯಂತ್ರಿಸಿ, ಆರೋಗ್ಯಯುತ ಜೀವನಶೈಲಿಯನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಸಮೋಸಾ, ಕಚೋರಿ ಹಾಗೂ ಪಿಜ್ಜಾ ಸೇರಿದಂತೆ ಎಲ್ಲ ಕುರುಕಲು ತಿಂಡಿ ಹೊಂದಿರುವ ‘ಎಣ್ಣೆ’ ಹಾಗೂ ‘ಸಕ್ಕರೆ’ ಪ್ರಮಾಣವನ್ನು ಪೊಟ್ಟಣಗಳ ಮೇಲೆ ಪ್ರದರ್ಶಿಸಬೇಕು ಎಂದು ಕೇಂದ್ರ ಆರೋಗ್ಯ ಸಚಿವಾಲಯವು ಎಲ್ಲ ಸಚಿವಾಲಯ ಹಾಗೂ ವಿಭಾಗಗಳಿಗೆ ಸೂಚನೆ ಕಳುಹಿಸಿದೆ.
ಬೊಜ್ಜು ವಿರುದ್ಧ ಹೋರಾಡುವ ನಿಟ್ಟಿನಲ್ಲಿ ಲೆಟರ್‌ಹೆಡ್, ನೋಟ್‌ಪ್ಯಾಡ್, ಪೋಲ್ಡರ್‌ಗಳಲ್ಲಿಯೂ ಆರೋಗ್ಯಕ್ಕೆ ಸಂಬಂಧಿಸಿದ ಸಂದೇಶಗಳನ್ನು ಪ್ರಕಟಿಸಬೇಕು ಎಂದು ಹೇಳಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.