ADVERTISEMENT

ಹಿಮಪಾತ: ಅಟಲ್‌ ಸುರಂಗದಲ್ಲಿ ಸಿಲುಕಿದ್ದ 300 ಪ್ರವಾಸಿಗರ ರಕ್ಷಣೆ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 31 ಜನವರಿ 2024, 9:39 IST
Last Updated 31 ಜನವರಿ 2024, 9:39 IST
<div class="paragraphs"><p>ಅಟಲ್‌ ಸುರಂಗದ ಬಳಿ ಹಿಮದಲ್ಲಿ ಮುಚ್ಚಿರುವ ವಾಹನ, ಮನೆ</p></div>

ಅಟಲ್‌ ಸುರಂಗದ ಬಳಿ ಹಿಮದಲ್ಲಿ ಮುಚ್ಚಿರುವ ವಾಹನ, ಮನೆ

   

ಪಿಟಿಐ ಚಿತ್ರ

ಕುಲು (ಹಿಮಾಚಲ ಪ್ರದೇಶ): ಭಾರಿ ಹಿಮಪಾತದಿಂದಾಗಿ ಅಟಲ್‌ ಸುರಂಗದಲ್ಲಿ ಸಿಲುಕಿದ್ದ 300 ಪ್ರವಾಸಿಗರನ್ನು ಹಿಮಾಚಲ ಪ್ರದೇಶ ಪೊಲೀಸರು ರಕ್ಷಿಸಿದ್ದಾರೆ.

ADVERTISEMENT

ಹಿಮಾಚಲ ಪ್ರದೇಶ ರಾಜ್ಯ ಸಾರಿಗೆ ಬಸ್‌ ಸೇರಿ ಸುಮಾರು 50 ವಾಹನಗಳು ಅಟಲ್‌ ಸುರಂಗದಲ್ಲಿ ಸಿಲುಕಿದ್ದವು, ಎಲ್ಲಾ ವಾಹನಗಳನ್ನು ಮತ್ತು ಪ್ರಯಾಣಿಕರನ್ನು ಸುರಕ್ಷಿತವಾಗಿ ಹೊರಕ್ಕೆ ಕರೆತರಲಾಗಿದೆ ಎಂದು ಕುಲು ಪೊಲೀಸ್‌ ವರಿಷ್ಠಾಧಿಕಾರಿ ಸಾಕ್ಷಿ ವೆರ್ಮಾ ತಿಳಿಸಿದ್ದಾರೆ. 

ಮುಂದಿನ 48 ಗಂಟೆಗಳಲ್ಲಿ ಹಿಮಾಚಲ ಪ್ರದೇಶದ ಎತ್ತರದ ಪ್ರದೇಶದಲ್ಲಿ ಹಿಮಪಾತ ಮತ್ತು ಮಳೆ ಬೀಳುವ ಸಾಧ್ಯತೆ ಇರುವ ಕಾರಣ ಭಾರತೀಯ ಹವಾಮಾನ ಇಲಾಖೆ ಆರೆಂಜ್‌ ಅಲರ್ಟ್‌ ಘೋಷಣೆ ಮಾಡಿದೆ.

ಚಂಬಾ, ಕಂಗ್ರಾ, ಸ್ಪಿತಿ, ಮಂಡಿ, ಶಿಮ್ಲಾ ಸೇರಿ ಹಲವು ಜಿಲ್ಲೆಗಳಲ್ಲಿ ಆರೆಂಜ್‌ ಅಲರ್ಟ್‌ ಘೋಷಣೆ ಮಾಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.