ADVERTISEMENT

ವಾರ್ಷಿಕ ₹50 ಸಾವಿರ ಆದಾಯವಿದ್ದರೆ ಉಚಿತ ನೀರಿಲ್ಲ: ಹಿಮಾಚಲ ಪ್ರದೇಶ ಸರ್ಕಾರ

ಹಿಮಾಚಲ ಪ್ರದೇಶ ಸರ್ಕಾರದಿಂದ ನಿರ್ಧಾರ; ಗ್ರಾಮೀಣ ನಿವಾಸಿಗಳಿಗೆ ಆಘಾತ

ಪಿಟಿಐ
Published 10 ಆಗಸ್ಟ್ 2024, 15:21 IST
Last Updated 10 ಆಗಸ್ಟ್ 2024, 15:21 IST
ಸುಖ್ವಿಂದರ್‌ ಸಿಂಗ್ ಸುಖು-ಪಿಟಿಐ ಚಿತ್ರ
ಸುಖ್ವಿಂದರ್‌ ಸಿಂಗ್ ಸುಖು-ಪಿಟಿಐ ಚಿತ್ರ   

ಶಿಮ್ಲಾ: ಹಿಮಾಚಲ ಪ್ರದೇಶದ ಗ್ರಾಮೀಣ ಭಾಗದಲ್ಲಿ ನೀರಿನ ಉಚಿತ ಸೌಲಭ್ಯ ಪಡೆಯುತ್ತಿದ್ದ ನಿವಾಸಿಗಳಿಗೆ ಸರ್ಕಾರ‌ದ ಹೊಸ ಆದೇಶ ಬಿಸಿ ತಟ್ಟಿದೆ.

ವಾರ್ಷಿಕ ₹50 ಸಾವಿರ ಆದಾಯ ಹೊಂದಿದ್ದರೆ, ಮಾಸಿಕ ₹100 ನೀರಿನ ಶುಲ್ಕ ಪಾವತಿಸಬೇಕು ಎಂದು ಸರ್ಕಾರ ತಿಳಿಸಿದೆ. ವಾಣಿ‌ಜ್ಯ ವಹಿವಾಟು ನಡೆಸುವವರು ಕಿಲೋ ಲೀಟರ್‌ಗೆ ತಕ್ಕಂತೆ ಶುಲ್ಕ ಪಾವತಿಸಬೇಕು ಎಂದು ಸ್ಪಷ್ಟಪಡಿಸಿದೆ.

‘ಸಬ್ಸಿಡಿಯನ್ನು ಕಡಿತಗೊಳಿಸಿ, ಆದಾಯ ಹೆಚ್ಚಿಸುವ ನಿಟ್ಟಿನಲ್ಲಿ ರಾಜ್ಯ ಸಚಿವ ಸಂಪುಟವು ಈ ನಿರ್ಧಾರ ತೆಗೆದುಕೊಂಡಿದೆ. ಹೋಟೆಲ್‌, ಹೋಮ್‌ಸ್ಟೆ ಸೇರಿದಂತೆ ‌ವಾಣಿಜ್ಯ ಸಂಸ್ಥೆಗಳಿಗೆ ಮೀಟರ್‌ ಅಳವಡಿಸಿ, ವಾಣಿಜ್ಯ ದರದಲ್ಲಿ ನೀರು ಪೂರೈಸಲಾಗುವುದು. ಜನರಿಂದ ಸಂಗ್ರಹವಾಗುವ ಹಣವನ್ನು ಗುಣಮಟ್ಟದ ಕುಡಿಯುವ ನೀರು ಪೂರೈಕೆಗೆ ಬಳಸಿಕೊಳ್ಳಲಾಗುವುದು’ ಎಂದು ಮುಖ್ಯಮಂತ್ರಿ ಸುಖ್ವಿಂದರ್‌ ಸಿಂಗ್ ಸುಖು ತಿಳಿಸಿದರು.

ADVERTISEMENT

‘ವಿಧವೆಯರು, ಕಡುಬಡವರು, ಅಂಗವಿಕಲರು ಹಾಗೂ ಆರ್ಥಿಕವಾಗಿ ದುರ್ಬಲ ಸಮುದಾಯಗಳಿಗೆ ಉಚಿತ ಸೌಲಭ್ಯ ಮುಂದುವರಿಯಲಿದೆ’ ಎಂದು ವಿವರಿಸಿದರು.

‘2022ರ ಮೇ ತಿಂಗಳಲ್ಲಿ ಹಿಂದಿನ ಬಿಜೆಪಿ ಸರ್ಕಾರವು ಗ್ರಾಮೀಣ ಭಾಗದ ನಿವಾಸಿಗಳಿಗೆ ಉಚಿತವಾಗಿ ನೀರು ಪೂರೈಸಲು ಕ್ರಮ ಕೈಗೊಂಡಿತ್ತು. ಇದರಿಂದ ಸರ್ಕಾರಕ್ಕೆ ವಾರ್ಷಿಕ ₹800 ಕೋಟಿ ಆದಾಯ ನಷ್ಟ ಉಂಟಾಗುತ್ತಿತ್ತು’ ಎಂದು ಅಧಿಕಾರಿಯೊಬ್ಬರು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.