
ಹಿಮಾಚಲ ಪ್ರದೇಶದ ಮನಾಲಿಯಲ್ಲಿ ಹಿಮ ಬೀಳುತ್ತಿದೆ. ಮಳೆಯಂತೆ ಹಿಮ ಬೀಳುತ್ತಿರುವುದನ್ನು ಕಂಡ ಪ್ರವಾಸಿಗರು ಕುಣಿದು ಕುಪ್ಪಳಿಸಿದ್ದಾರೆ.
ಚಿತ್ರ: ಪಿಟಿಐ
ರಸ್ತೆ, ಕಾರುಗಳ ಮೇಲೆ ಹಿಮ ಆವರಿಸಿಕೊಂಡಿದ್ದು ಎಲ್ಲೆಲ್ಲೂ ಬಿಳಿಯ ಬಣ್ಣ ಕಾಣುತ್ತಿದೆ.
ಮನೆಯಗಳ ಮೇಲ್ಛಾವಣಿಗಳನ್ನು ಹಿಮ ಆವರಿಸಿದ್ದು, ಬಿಳಿಯ ಗುಡ್ಡದಂತೆ ಕಾಣಿಸುತ್ತಿದೆ
ಕುಲು, ಚಂಬಾ, ಸ್ಪಿತಿ ಪ್ರದೇಶಗಳಲ್ಲಿ ಭಾರಿ ಹಿಮಪಾತವಾಗುತ್ತಿದ್ದು, ತೀವ್ರ ಗಾಳಿಯೂ ಬೀಸುವ ಸಾಧ್ಯತೆ ಇರುವುದರಿಂದ ಸ್ಥಳೀಯ ಆಡಳಿತ 'ಆರೆಂಜ್ ಅಲರ್ಟ್' ಘೋಷಿಸಿದೆ.
ಮೂರು ತಿಂಗಳ ಶುಷ್ಕ ಹವಾಮಾನದ ನಂತರ ಹಿಮಾಚಲ ಪ್ರದೇಶದಲ್ಲಿ ಈ ಋತುವಿನ ಮೊದಲ ಹಿಮಪಾತವಾಗುತ್ತಿದೆ
ಮನಾಲಿಯಲ್ಲಿರುವ ಜನ ತಮ್ಮ ಮನೆಯ ಬಳಿ ಆಗುತ್ತಿರುವ ಹಿಮಪಾತದ ಬಗ್ಗೆ ಫೋಟೊಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುತ್ತಿದ್ದಾರೆ.
ಮನೆಯ ಹೊರಭಾಗದಲ್ಲಿ ಸಂಪೂರ್ಣವಾಗಿ ಹಿಮ ಆವರಿಸಿಕೊಂಡಿರುವ ಫೋಟೊಗಳನ್ನು ಎಕ್ಸ್ ಬಳಕೆದಾರರೊಬ್ಬರು ಹಂಚಿಕೊಂಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.