ADVERTISEMENT

ಹಿಂದೂ ಗುರುಗಳಿಂದ ಮಿಷನರಿಗಳನ್ನೂ ಮೀರಿದ ಸೇವೆ: RSS ಮುಖ್ಯಸ್ಥ ಮೋಹನ್ ಭಾಗವತ್

ಪಿಟಿಐ
Published 7 ಏಪ್ರಿಲ್ 2023, 10:10 IST
Last Updated 7 ಏಪ್ರಿಲ್ 2023, 10:10 IST
ಮೋಹನ್ ಭಾಗವತ್
ಮೋಹನ್ ಭಾಗವತ್   

ಜೈಪುರ: ಮಿಷನರಿಗಳು ಮಾಡಿರುವುದಕ್ಕಿಂತಲೂ ಹೆಚ್ಚಿನ ಸೇವೆಯನ್ನು ಹಿಂದೂ ಆಧ್ಯಾತ್ಮಿಕ ಗುರುಗಳು ಮಾಡಿದ್ದಾರೆ ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ (ಆರ್‌ಎಸ್‌ಎಸ್) ಮುಖ್ಯಸ್ಥ ಮೋಹನ್ ಭಾಗವತ್ ಹೇಳಿದ್ದಾರೆ.

ಆರ್‌ಎಸ್‌ಎಸ್ ವತಿಯಿಂದ ಇಲ್ಲಿ ಆಯೋಜನೆಗೊಂಡಿದ್ದ ರಾಷ್ಟ್ರೀಯ ಸೇವಾ ಸಂಗಮ ಕಾರ್ಯಕ್ರಮದಲ್ಲಿ ಮಾತನಾಡಿದ ಭಾಗವತ್‌, 'ಸೇವೆಯು ಆರೋಗ್ಯಕರ ಸಮಾಜವನ್ನು ಕಟ್ಟಲು ನೆರವಾಗುತ್ತದೆ. ಸಮಾಜದ ಯಾವುದೇ ವರ್ಗವು ಅವಕಾಶದಿಂದ ವಂಚಿತವಾಗುತ್ತಿದ್ದರೆ, ಅದನ್ನು ದೇಶದ ಒಳಿತಿನ ದೃಷ್ಟಿಯಿಂದ ಮೇಲೆತ್ತಬೇಕು' ಎಂದು ಉಲ್ಲೇಖಿಸಿದ್ದಾರೆ.

'ಸಾಮಾನ್ಯವಾಗಿ ದೇಶದ ಬುದ್ದಿಜೀವಿಗಳು, ಮಿಷನರಿಗಳನ್ನು ಅವುಗಳ ಸೇವೆಗಾಗಿ ಗುರುತಿಸುತ್ತವೆ. ಆದರೆ, ದಕ್ಷಿಣದ ನಾಲ್ಕು ರಾಜ್ಯಗಳಲ್ಲಿ ಹಿಂದೂ ಆಧ್ಯಾತ್ಮಿಕ ಗುರುಗಳು ಮಿಷನರಿಗಳು ನೀಡಿರುವುದಕ್ಕಿಂತಲೂ ಹೆಚ್ಚಿನ ಸೇವೆ ನೀಡಿದ್ದಾರೆ' ಎಂದು ಹೇಳಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.