ADVERTISEMENT

ದೆಹಲಿಯಲ್ಲಿ ಕಾನೂನು ಕಾಪಾಡಲಾಗದಿದ್ದರೆ ರಾಜೀನಾಮೆ ನೀಡಿ: ಅಮಿತ್ ಶಾಗೆ ಕೇಜ್ರಿವಾಲ್

ಪಿಟಿಐ
Published 3 ಡಿಸೆಂಬರ್ 2024, 10:26 IST
Last Updated 3 ಡಿಸೆಂಬರ್ 2024, 10:26 IST
<div class="paragraphs"><p>ಅರವಿಂದ ಕೇಜ್ರಿವಾಲ್‌</p></div>

ಅರವಿಂದ ಕೇಜ್ರಿವಾಲ್‌

   

ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಕಾನೂನು ಸುವ್ಯವಸ್ಥೆಯನ್ನು ಕಾಪಾಡಲು ಸಾಧ್ಯವಾಗದಿದ್ದರೆ ರಾಜೀನಾಮೆ ನೀಡಿ ಎಂದು ಕೇಂದ್ರ ಗೃಹ ಸಚಿವ ಅಮಿತ್‌ ಶಾ ವಿರುದ್ಧ ಎಎಪಿ ನಾಯಕ ಅರವಿಂದ ಕೇಜ್ರಿವಾಲ್‌ ವಾಗ್ದಾಳಿ ನಡೆಸಿದ್ದಾರೆ.

ಇತ್ತೀಚೆಗೆ ಪೀಥಂಪುರ್ ಕೊಳಗೇರಿ ಪ್ರದೇಶದಲ್ಲಿ ಯುವಕರ ಗುಂಪು ನಡೆಸಿದ ದಾಳಿಯಲ್ಲಿ ಮೃತಪಟ್ಟ ಯುವಕನ ಪೋಷಕರನ್ನು ಭೇಟಿ ಮಾಡಿದ ಬಳಿಕ ಮಾತನಾಡಿದ ಕೇಜ್ರಿವಾಲ್‌, ‘ಕಾನೂನಿನ ಅವ್ಯವಸ್ಥೆಯಿಂದಾಗಿ ಜನರು ಮನೆಯಿಂದ ಹೊರಬರಲು ಭಯಪಡುತ್ತಿದ್ದಾರೆ. ಅಮಿತ್‌ ಶಾ ಅವರು ದೆಹಲಿಯಲ್ಲಿ ಕಾನೂನನ್ನು ಕಾಪಾಡದೇ, ದೇಶದಾದ್ಯಂತ ರಾಜಕೀಯ ಪ್ರವಾಸ ಮಾಡುವಂತಿದ್ದರೆ ಸ್ಥಾನಕ್ಕೆ ರಾಜೀನಾಮೆ ನೀಡಲಿ. ಪೊಲೀಸರು ಕೂಡ ಆರೋಪಿಗಳ ವಿರುದ್ಧ ಕ್ರಮ ಕೈಗೊಳ್ಳಲು ಹೆದರುತ್ತಿದ್ದಾರೆ. ಅಲ್ಲದೆ ಕೇಂದ್ರ ಗೃಹ ಸಚಿವಾಲಯದ ಅಡಿ ಕಾರ್ಯನಿರ್ವಹಿಸುತ್ತಿರುವ ದೆಹಲಿ ಪೊಲೀಸರಿಂದಲೂ ಪ್ರಕರಣಕ್ಕೆ ಸಂಬಂಧಿಸಿದಂತೆ ಯಾವುದೇ ಪ್ರತಿಕ್ರಿಯೆ ಬಂದಿಲ್ಲ’ ಎಂದು ದೂರಿದರು.

ADVERTISEMENT

ಎಎಪಿಯು ಜನರನ್ನು ಒಟ್ಟುಗೂಡಿಸಿ ನಗರದಲ್ಲಿ ಜನರ ಸುರಕ್ಷತೆಯನ್ನು ಖಾತ್ರಪಡಿಸುವಂತೆ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರವನ್ನು ಒತ್ತಾಯಿಸಲಿದೆ ಎಂದು ಭರವಸೆ ನೀಡಿದರು.

‘ಮಾದಕ ದ್ರವ್ಯ ವ್ಯಸನಿಗಳ ದೌರ್ಜನ್ಯ, ಸರಗಳ್ಳತನ ಸೇರಿದಂತೆ ಹಲವು ಅಪರಾಧ ಪ್ರಕರಣಗಳು ಅತಿರೇಕವಾಗಿವೆ. ಸಂತ್ರಸ್ತರ ಮನೆಗೆ ಭೇಟಿ ನೀಡುವಂತೆ, ಜನರ ಸಮಸ್ಯೆ ಆಲಿಸುವಂತೆ ದಿನಕ್ಕೆ ಹಲವಾರು ದೂರವಾಣಿ ಕರೆಗಳ ಬರುತ್ತಿವೆ’ ಎಂದು ಕೇಜ್ರಿವಾಲ್‌ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.