ADVERTISEMENT

ಹೈಟಿ: ಭೂಕಂಪನ ಬಳಿಕ ಭಾರಿ ಮಳೆ- ಒಟ್ಟು 1,419 ಜನರ ಸಾವು

ರಾಯಿಟರ್ಸ್
Published 17 ಆಗಸ್ಟ್ 2021, 12:01 IST
Last Updated 17 ಆಗಸ್ಟ್ 2021, 12:01 IST
ಹೈಟಿಯ ಲೆಸ್‌ ಕೆಯೆಸ್‌ನಲ್ಲಿ ಭೂಕಂಪನ ಹಾಗೂ ಧಾರಾಕಾರ ಮಳೆಯಿಂದಾಗಿ ಅತಂತ್ರಗೊಂಡಿರುವ ನಿವಾಸಿಗಳು ಮಂಗಳವಾರ ಆಹಾರ ಪೊಟ್ಟಣವನ್ನು ಪಡೆದುಕೊಳ್ಳಲು ಮುಗಿಬಿದ್ದುದು ಹೀಗೆ. –ಪಿಟಿಐ ಚಿತ್ರ
ಹೈಟಿಯ ಲೆಸ್‌ ಕೆಯೆಸ್‌ನಲ್ಲಿ ಭೂಕಂಪನ ಹಾಗೂ ಧಾರಾಕಾರ ಮಳೆಯಿಂದಾಗಿ ಅತಂತ್ರಗೊಂಡಿರುವ ನಿವಾಸಿಗಳು ಮಂಗಳವಾರ ಆಹಾರ ಪೊಟ್ಟಣವನ್ನು ಪಡೆದುಕೊಳ್ಳಲು ಮುಗಿಬಿದ್ದುದು ಹೀಗೆ. –ಪಿಟಿಐ ಚಿತ್ರ   

ಲೆಸ್‌ ಕೆಯೆಸ್‌, ಹೈಟಿ: ಭೂಕಂಪನದಿಂದ ತತ್ತರಿಸಿರುವ ಹೈಟಿಯಲ್ಲಿ ಮಂಗಳವಾರ ಧಾರಾಕಾರ ಮಳೆಯಾಗಿದ್ದು, ರಕ್ಷಣಾ ಕಾರ್ಯಕ್ಕೆ ಅಡಚಣೆ ಉಂಟಾಗಿದೆ. ಭೂಕಂಪದಿಂದ ಮೃತಪಟ್ಟವರಸಂಖ್ಯೆ 1,419ಕ್ಕೆ ಏರಿದ್ದು, ಸುಮಾರು 6,900 ಮಂದಿ ಗಾಯಗೊಂಡಿದ್ದಾರೆ.

ಬಿರುಗಾಳಿ, ಧಾರಾಕಾರ ಮಳೆ ಹಾಗೂ ಕೆಲವೆಡೆ ಪ್ರವಾಹ ಪರಿಸ್ಥಿತಿಯು ರಕ್ಷಣಾ ಕಾರ್ಯದ ಮೇಲೆ ಪರಿಣಾಮ ಬೀರಿದೆ. ಅವಶೇಷಗಳ ನಡುವೆ ಸಿಲುಕಿದ್ದವರನ್ನು ರಕ್ಷಿಸಬಹುದು ಎಂಬ ವಿಶ್ವಾಸವು ಕುಗ್ಗಿದೆ.

ಭೂಕಂಪನದಿಂದಾಗಿ ಸುಮಾರರು 37,312 ಮನೆಗಳು ಕುಸಿದಿವೆ. ಇದರಿಂದಾಗಿ ಮೃತರ ಸಂಖ್ಯೆ ಇನ್ನಷ್ಟು ಏರಿಕೆಯಾಗುವ ಸಂಭವವಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.