ADVERTISEMENT

ಹೈದರಾಬಾದ್ ಎನ್‌ಕೌಂಟರ್: ತಕ್ಷಣ ತನಿಖೆಗೆ ಮಾನವ ಹಕ್ಕು ಆಯೋಗ ಆದೇಶ

ಶಿಕ್ಷೆ ನೀಡುವುದು ಕೋರ್ಟ್‌ ಕೆಲಸ ಎಂದ ಆಯೋಗ

​ಪ್ರಜಾವಾಣಿ ವಾರ್ತೆ
Published 6 ಡಿಸೆಂಬರ್ 2019, 19:01 IST
Last Updated 6 ಡಿಸೆಂಬರ್ 2019, 19:01 IST
 ಮಾನವ ಹಕ್ಕು ಆಯೋಗ
ಮಾನವ ಹಕ್ಕು ಆಯೋಗ   

ನವದೆಹಲಿ: ತೆಲಂಗಾಣದಲ್ಲಿ ನಡೆದ ನಾಲ್ವರು ಅತ್ಯಾಚಾರ ಆರೋಪಿಗಳ ಎನ್‌ಕೌಂಟರ್‌ ಹತ್ಯೆಗೆ ಸಂಬಂಧಿಸಿ ತನಿಖೆ ನಡೆಸುವಂತೆ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗವು (ಎನ್‌ಎಚ್‌ಆರ್‌ಸಿ) ಆದೇಶಿಸಿದೆ. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸುವ ಸುಳಿವನ್ನು ಆಯೋಗವು ನೀಡಿದೆ. ಬಂಧಿತ ವ್ಯಕ್ತಿಗಳು ತಪ್ಪಿತಸ್ಥರಾಗಿದ್ದರೂ ಅವರಿಗೆ ಶಿಕ್ಷೆ ವಿಧಿಸಬೇಕಾದದ್ದು ನ್ಯಾಯಾಲಯ ಮಾತ್ರ ಎಂದು ಹೇಳಿದೆ.

ಮಹಿಳೆಯರ ಮೇಲೆ ದೌರ್ಜನ್ಯ ಹೆಚ್ಚುತ್ತಿರುವುದು ಸಮಾಜದಲ್ಲಿ ಭೀತಿ ಮತ್ತು ಆಕ್ರೋಶಕ್ಕೆ ಕಾರಣವಾಗಿದೆ. ಆದರೆ, ಕಾನೂನು ಪ್ರಕಾರವೇ ಪೊಲೀಸರು ಬಂಧಿಸಿರುವ ವ್ಯಕ್ತಿಗಳು ಯಾವುದೇ ಸನ್ನಿವೇಶದಲ್ಲಿ ಜೀವ ಕಳೆದುಕೊಂಡರೂ ಅದು ಖಂಡಿತ ಕೆಟ್ಟ ಸಂದೇಶ ನೀಡುತ್ತದೆ ಎಂದು ಆಯೋಗದ ಮುಖ್ಯಸ್ಥ ನ್ಯಾಯಮೂರ್ತಿ ಎಚ್‌.ಎಲ್‌. ದತ್ತು ಹೇಳಿದ್ದಾರೆ.

ಪೊಲೀಸ್‌ ವಶದಲ್ಲಿದ್ದ ನಾಲ್ವರು ಆರೋಪಿಗಳ ಹತ್ಯೆಯು ಕಳವಳದ ವಿಚಾರ. ಪೊಲೀಸ್‌ ಸಿಬ್ಬಂದಿಯು ಎಚ್ಚರಿಕೆಯಿಂದ ಇರಲಿಲ್ಲ ಮತ್ತು ಆರೋಪಿಗಳನ್ನು ಘಟನಾ ಸ್ಥಳಕ್ಕೆ ಕರೆದೊಯ್ದಾಗ ಎದುರಾಗಬಹುದಾದ ಸನ್ನಿವೇಶವನ್ನು ನಿಭಾಯಿಸಲು ಸಜ್ಜಾಗಿರಲಿಲ್ಲ ಎಂಬುದನ್ನು ಘಟನೆಯು ತೋರಿಸುತ್ತದೆ. ಪರಿಣಾಮವಾಗಿ ನಾಲ್ವರು ಜೀವ ಕಳೆದುಕೊಂಡಿದ್ದಾರೆ. ತನಿಖೆಯ ವೇಳೆಯಲ್ಲಿ ಪೊಲೀಸರು ನಾಲ್ವರನ್ನು ಬಂಧಿಸಿದ್ದಾರೆ. ಪ್ರಕರಣದ ತೀರ್ಪನ್ನು ಸಂಬಂಧಪಟ್ಟ ನ್ಯಾಯಾಲಯವೇ ನೀಡಬೇಕಿತ್ತು ಎಂದು ಅವರು ಪ್ರತಿಪಾದಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.