ADVERTISEMENT

ತೆಲಂಗಾಣ: ನೂಪುರ್ ಶರ್ಮಾ ಬೆಂಬಲಿಸಿ ರ್‍ಯಾಲಿ, ಉದ್ವಿಗ್ನ ಪರಿಸ್ಥಿತಿ

ಪಿಟಿಐ
Published 14 ಜೂನ್ 2022, 11:15 IST
Last Updated 14 ಜೂನ್ 2022, 11:15 IST
ನೂಪುರ್‌ ಶರ್ಮಾ - ಪಿಟಿಐ ಚಿತ್ರ
ನೂಪುರ್‌ ಶರ್ಮಾ - ಪಿಟಿಐ ಚಿತ್ರ   

ಹೈದರಾಬಾದ್: ಬಿಜೆಪಿಯ ಮಾಜಿ ವಕ್ತಾರೆ ನೂಪುರ್‌ ಶರ್ಮಾ ಅವರನ್ನು ಬೆಂಬಲಿಸಿ ತೆಲಂಗಾಣದ ಸಿಕಂದರಾಬಾದ್‌ನ ಬೊವೆನ್‌ಪಲ್ಲಿಯ ಹಸ್‌ಮತ್‌ಪೇಟ್ ಪ್ರದೇಶದಲ್ಲಿ ಹಲವರು ರ್‍ಯಾಲಿ ನಡೆಸಿದ್ದಾರೆ. ಇದಕ್ಕೆ ಮತ್ತೊಂದು ಗುಂಪು ಆಕ್ಷೇಪ ವ್ಯಕ್ತಪಡಿಸಿ ಘೋಷಣೆಗಳನ್ನು ಕೂಗಿದ್ದು, ಉದ್ವಿಗ್ನ ಪರಿಸ್ಥಿತಿ ಸೃಷ್ಟಿಯಾಗಿತ್ತು. ಈ ವಿಚಾರವಾಗಿ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಹಸ್‌ಮತ್‌ಪೇಟ್‌ನಲ್ಲಿ ಹಲವರು ಸೋಮವಾರ ರಾತ್ರಿ ನೂಪುರ್ ಶರ್ಮಾ ಪರ ಘೋಷಣೆಗಳನ್ನು ಕೂಗುತ್ತಾ ರ್‍ಯಾಲಿ ನಡೆಸಿದ್ದಾರೆ. ಇದೇ ವೇಳೆ, ಮತ್ತೊಂದು ಗುಂಪು ನೂಪುರ್ ಶರ್ಮಾ ವಿರುದ್ಧ ಘೋಷಣೆಗಳನ್ನು ಕೂಗಿದೆ. ಎರಡೂ ಗುಂಪುಗಳು ಮುಖಾಮುಖಿಯಾಗಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿತ್ತು. ಪೊಲೀಸರು ಮಧ್ಯ ಪ್ರವೇಶಿಸಿ ಪರಿಸ್ಥಿತಿ ತಿಳಿಗೊಳಿಸಿದರು ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಅನುಮತಿ ಪಡೆಯದೆ ರ್‍ಯಾಲಿ ಆಯೋಜಿಸಿದವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಬೊವೆನ್‌ಪಲ್ಲಿ ಪೊಲೀಸ್ ಠಾಣೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಮತ್ತೊಂದು ಗುಂಪಿನಲ್ಲಿದ್ದವರನ್ನೂ ಪತ್ತೆಮಾಡಿ ಅವರ ವಿರುದ್ಧವೂ ಪ್ರಕರಣ ದಾಖಲಿಸಲಾಗುವುದು ಎಂದು ಅವರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.