ADVERTISEMENT

ಪತ್ನಿ ಕೊಂದು, ಕೋವಿಡ್‌ನಿಂದ ಸತ್ತಳು ಎಂದು ಕಥೆ ಕಟ್ಟಿದ ಟೆಕಿ

​ಪ್ರಜಾವಾಣಿ ವಾರ್ತೆ
Published 29 ಜೂನ್ 2021, 12:29 IST
Last Updated 29 ಜೂನ್ 2021, 12:29 IST
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ   

ತಿರುಪತಿ:ಪತ್ನಿಯನ್ನು ಬರ್ಬರವಾಗಿ ಹತ್ಯೆ ಮಾಡಿ ಶವವನ್ನು ಸೂಟ್‌ಕೇಸ್‌ನಲ್ಲಿ ಬಿಸಾಡಿದ್ದ ಸಾಫ್ಟ್‌ವೇರ್‌ ಎಂಜಿನಿಯರ್ ಶ್ರೀಕಾಂತ್‌ ರೆಡ್ಡಿ ಎಂಬುವರ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ

27 ವರ್ಷದ ಭುವನೇಶ್ವರಿ ಕೊಲೆಯಾಗಿರುವ ಮಹಿಳೆ. ಶ್ರೀಕಾಂತ್‌ ಮತ್ತು ಭುವನೇಶ್ವರಿ ಇಲ್ಲಿನ ಫ್ಲಾಟ್‌ವೊಂದರಲ್ಲಿ ವಾಸವಾಗಿದ್ದರು. ಇವರಿಗೆ 18 ತಿಂಗಳ ಹೆಣ್ಣು ಮಗು ಇದೆ.

ಭುವನೇಶ್ವರಿ ಖಾಸಗಿ ಕಂಪನಿಯಲ್ಲಿ ಟೆಕಿಯಾಗಿ ಕೆಲಸ ಮಾಡುತ್ತಿದ್ದರು. ಕೋವಿಡ್‌ ಕಾರಣದಿಂದ ಭುವನೇಶ್ವರಿ ಮನೆಯಿಂದಲೇ ಕೆಲಸ ಮಾಡುತ್ತಿದ್ದರು. ಸದ್ಯ ಕೆಲಸವಿಲ್ಲದೆ ಶ್ರೀಕಾಂತ್‌ ನಿರುದ್ಯೋಗಿಯಾಗಿದ್ದರು ಎನ್ನಲಾಗಿದೆ.

ADVERTISEMENT

ಪತ್ನಿಯನ್ನು ಕೊಂದಿದ್ದ ಶ್ರೀಕಾಂತ್‌, ಶವವನ್ನು ಶೇ.90ರಷ್ಟು ಸುಟ್ಟು ಅದನ್ನು ಸೂಟ್‌ಕೇಸ್‌ನಲ್ಲಿ ಇಟ್ಟು, ಇಲ್ಲಿನಎಸ್ವಿಆರ್ಆರ್ ಸರ್ಕಾರಿ ಆಸ್ಪತ್ರೆ ಸಮೀಪ ಬಿಸಾಡಿದ್ದನ್ನು. ಭುವನೇಶ್ವರಿ ಕೋವಿಡ್‌ನಿಂದ ಮೃತಪಟ್ಟಿದ್ದಾರೆ, ಅವರ ಶವವನ್ನು ಪೊಲೀಸರೇ ದಹನ ಮಾಡಿದ್ದಾರೆ ಎಂದು ಭುವನೇಶ್ವರಿ ಪೋಷಕರಿಗೆ ಕಥೆ ಕಟ್ಟಿದ್ದನು.

ಅನುಮಾನಗೊಂಡಭುವನೇಶ್ವರಿ ಪೋಷಕರು ತಿರುಪತಿ ಪೊಲೀಸರಿಗೆ ದೂರು ನೀಡಿದ್ದರು. ಸೂಟ್‌ಕೇಸ್‌ನಲ್ಲಿ ಪತ್ತೆಯಾಗಿದ್ದ ಶವವನ್ನು ಭುವನೇಶ್ವರಿ ಪೋಷಕರಿಗೆ ತೋರಿಸಿದಾಗ ಅದು ಭುವನೇಶ್ವರಿ ಮೃತದೇಹ ಎಂಬುದು ಪತ್ತೆಯಾಯಿತು ಎಂದು ಪೊಲೀಸರು ತಿಳಿಸಿದ್ದಾರೆ.

ಫ್ಲಾಟ್‌ನಲ್ಲಿರುವ ಸಿಸಿಟಿವಿ ಕ್ಯಾಮೆರಾಗಳನ್ನು ಚೆಕ್‌ ಮಾಡಿದಾಗ ಶ್ರೀಕಾಂತ್‌ ದೊಡ್ಡ ಸೂಟ್‌ಕೇಸ್‌ ತೆಗೆದುಕೊಂಡು ಹೋಗಿರುವುದು ಗೊತ್ತಾಯಿತು ಎಂದು ಪೊಲೀಸರು ತಿಳಿಸಿದ್ದಾರೆ. ಘಟನೆ ಕುರಿತು ಪೊಲೀಸರು ತನಿಖೆ ಕೈಗೊಂಡಿದ್ದು ಆರೋಪಿ ಪತ್ತೆಗೆ ಬಲೆ ಬೀಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.