ADVERTISEMENT

ಹೈದರಾಬಾದ್‌ ಅವಳಿ ಬಾಂಬ್‌ ಸ್ಫೋಟ ಪ್ರಕರಣ: ಇಬ್ಬರಿಗೆ ಗಲ್ಲು, ಒಬ್ಬನಿಗೆ ಜೀವಾವಧಿ

ಏಜೆನ್ಸೀಸ್
Published 10 ಸೆಪ್ಟೆಂಬರ್ 2018, 13:27 IST
Last Updated 10 ಸೆಪ್ಟೆಂಬರ್ 2018, 13:27 IST
   

ಹೈದರಾಬಾದ್‌: ಹೈದರಾಬಾದ್‌ನಲ್ಲಿ 2007ರಲ್ಲಿ ನಡೆದ ಅವಳಿ ಬಾಂಬ್‌ ಸ್ಫೋಟ ಪ್ರಕಣಕ್ಕೆ ಸಂಬಂಧಿಸಿದಂತೆ ಆರೋಪಿ ತಾರಿಕ್ ಅಂಜುಂನನ್ನು ತಪಿತಸ್ಥ ಎಂದು ಘೋಷಿಸಿರುವ ರಾಷ್ಟ್ರೀಯ ತನಿಖಾ ದಳದ ವಿಶೇಷ ನ್ಯಾಯಾಲಯ, ಆತನಿಗೆ ಜೀವಾವಧಿ ಶಿಕ್ಷೆ ವಿಧಿಸಿದೆ.ಪ್ರಕರಣದಲ್ಲಿ ಭಾಗಿಯಾದವರಿಗೆ ನವದೆಹಲಿ ಮತ್ತು ಇತರ ಕಡೆಗಳಲ್ಲಿ ಆಶ್ರಯ ನೀಡಿದ ಆರೋಪ ಈತನ ಮೇಲಿತ್ತು.

ಅನೀಕ್‌ ಶಫೀಕ್‌ ಸೈಯದ್‌ ಮತ್ತು ಮೊಹಮ್ಮದ್‌ ಅಕ್ಬರ್‌ ಇಸ್ಮಾಯಿಲ್‌ ಚೌಧರಿ ದೋಷಿಎಂದುಸೆ.4ರಂದು ನ್ಯಾಯಾಲಯ ತೀರ್ಪು ನೀಡಿತ್ತು. ಇಂದು ಈ ಇಬ್ಬರೂ ಅಪರಾಧಿಗಳಿಗೆ ಗಲ್ಲು ಶಿಕ್ಷೆ ವಿಧಿಸಲಾಗಿದೆ.

ಪ್ರಕರಣದಲ್ಲಿ ಆರೋಪಿಗಳಾಗಿದ್ದ ಇನ್ನಿಬ್ಬರನ್ನುಸಾಕ್ಷ್ಯಾಧಾರಗಳ ಕೊರತೆಯಿಂದದೋಷಮುಕ್ತಗೊಳಿಸಲಾಗಿತ್ತು.

ADVERTISEMENT

ತೆಲಂಗಾಣ ಪೊಲೀಸ್‌ ಇಲಾಖೆಯ ಗುಪ್ತಚರ ವಿಭಾಗ ತನಿಖೆ ನಡೆಸಿದ್ದು, ಐವರು ಆರೋಪಿಗಳನ್ನು ಬಂಧಿಸಿತ್ತು. ತಲೆಮರೆಸಿಕೊಂಡಿರುವ ರಿಯಾಜ್‌ ಭಟ್ಕಳ್‌ ಮತ್ತು ಇಕ್ಬಾಲ್‌ ಭಟ್ಕಳ್‌, ಅಮೀರ್‌ ರೇಜಾ ಖಾನ್‌ ವಿರುದ್ಧವೂ ಆರೋಪಪಟ್ಟಿ ದಾಖಲಿಸಲಾಗಿದೆ.

2007ರ ಆಗಸ್ಟ್ 25ರಂದು ಗೋಕುಲ್ ಚಾಟ್ ಹಾಗೂ ಲುಂಬಿಣಿ ಉದ್ಯಾನದ ಬಳಿ ಐದು ನಿಮಿಷದ ಅಂತರದಲ್ಲಿ ಬಾಂಬ್ ಸ್ಫೋಟವಾಗಿತ್ತು. ಸ್ಫೋಟದಲ್ಲಿ 44 ಮಂದಿ ಮೃತಪಟ್ಟು, 68 ಜನ ಗಾಯಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.