ADVERTISEMENT

ಸುಷ್ಮಾ ಸ್ವರಾಜ್‍ ನೆರವಿನಿಂದ ಒಮಾನ್‌ನಲ್ಲಿದ್ದ ಹೈದರಾಬಾದ್ ಮೂಲದ ಮಹಿಳೆಯ ರಕ್ಷಣೆ

ಏಜೆನ್ಸೀಸ್
Published 16 ಮೇ 2019, 7:12 IST
Last Updated 16 ಮೇ 2019, 7:12 IST
   

ಹೈದರಾಬಾದ್: ಉದ್ಯೋಗದನೆಪದಲ್ಲಿ ಒಮಾನ್‍ಗೆ ಕರೆದೊಯ್ದು ಅಲ್ಲಿ ಸಿಕ್ಕಿಹಾಕಿಕೊಂಡಿದ್ದ ಹೈದರಾಬಾದ್ ಮೂಲದ ಮಹಿಳೆಯನ್ನು ಭಾರತದ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಸಹಾಯದಿಂದ ರಕ್ಷಿಸಲಾಗಿದೆ.

ಉದ್ಯೋಗ ಕೊಡಿಸುವುಗಾಗಿ ಹೇಳಿ ಕುಲ್ಸುಂ ಬಾನು ಎಂಬಾಕೆಯನ್ನು ಒಮಾನ್‍ಗೆ ಕರೆದೊಯ್ಯಲಾಗಿತ್ತು. ಕಳೆದ 5 ತಿಂಗಳಿನಿಂದ ಒಮಾನ್‍ನಲ್ಲಿ ಸಿಕ್ಕಿಹಾಕಿಕೊಂಡಿದ್ದ ಈಕೆಯನ್ನು ಸುಷ್ಮಾ ಸ್ವರಾಜ್ ನೆರವಿನಿಂದ ರಕ್ಷಿಸಲಾಗಿದೆ.ಈ ನೆರವಿಗೆ ಕುಲ್ಸುಂ ಬಾನು ಧನ್ಯವಾದಗಳನ್ನು ಹೇಳಿದ್ದಾರೆ.

ಕುಲ್ಸುಂ ಹೇಳಿದ್ದೇನು?

ADVERTISEMENT

ಈ ಬಗ್ಗೆ ಎಎನ್ಐ ಸುದ್ದಿಸಂಸ್ಥೆಯೊಂದಿಗೆ ಮಾತನಾಡಿದ ಕುಲ್ಸುಂ,ನನ್ನ ಮಗಳು ಸುಷ್ಮಾ ಸ್ವರಾಜ್ ಅವರಿಗೆ ಪತ್ರ ಬರೆದು ವಿಷಯ ತಿಳಿಸಿದ್ದಳು. ಇದಾದ ನಂತರ ನನ್ನ ಮೇಲೆ ಒಮಾನ್ ವಿಧಿಸಿದ್ದ 5000 ರಿಯಾಲ್ ದಂಡವನ್ನು ಭಾರತದ ರಾಯಭಾರಿ ಕಚೇರಿ ಪಾವತಿ ಮಾಡಿ, ನನ್ನನ್ನು ಭಾರತಕ್ಕೆ ವಾಪಸ್ ಕಳಿಸಿದೆ.ಒಮಾನ್‌ನಲ್ಲಿರುವ ಭಾರತೀಯ ರಾಯಭಾರಿ ಕಚೇರಿ ಮತ್ತು ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರ ಸಹಾಯದಿಂದ ಇದು ಸಾಧ್ಯವಾಯಿತು. ಅವರಿಗೆ ಧನ್ಯವಾದಗಳು.

ಏನಿದು ಪ್ರಕರಣ?
ನಾನು ಉದ್ಯೋಗದ ಹುಡುಕಾಟದಲ್ಲಿದ್ದೆ. ಆಗ ಅಬ್ರಾರ್ ಎಂಬ ಏಜೆಂಟ್ ನನಗೆ ಬ್ಯೂಟಿ ಪಾರ್ಲರ್‌ವೊಂದರಲ್ಲಿ ಬ್ಯೂಟಿಷನ್‌ ಆಗಿ ಕೆಲಸ ಕೊಡಿಸುವುದಾಗಿ ಹೇಳಿದರು. ಮಸ್ಕತ್‍ನಲ್ಲಿ ಈ ಕೆಲಸ ಇದ್ದು ತಿಂಗಳಿಗೆ ₹30,000 ಸಂಬಳ ಎಂದಿದ್ದರು ಅವರು.
ನಾನು ಇದಕ್ಕೆ ಒಪ್ಪಿದೆ.ನನ್ನನ್ನು 2018 ಡಿಸೆಂಬರ್ 17ರಂದು ಮಸ್ಕತ್‍ಗೆ ಕಳಿಸಿದರು.ಅಲ್ಲಿಗೆ ಹೋದ ಮೇಲೆ ಗೊತ್ತಾಗಿದ್ದು ಅಲ್ಲಿ ಬ್ಯೂಟಿಷನ್ ಕೆಲಸ ಇಲ್ಲ ಎಂಬುದು.ನಾನು ಕೆಲಸಕ್ಕೆಂದು ಹೋದ ಜಾಗದ ವ್ಯಕ್ತಿಯ ಮನೆಯಲ್ಲಿ ನನ್ನನ್ನು ಕೆಲಸದಾಳು ಆಗಿ ದುಡಿಸಿದರು. ಅಲ್ಲಿ ಒಂದು ತಿಂಗಳು ದುಡಿದ ನಂತರ ಅಲ್ಲಿ ಕಲಸ ಮಾಡಲು ನಿರಾಕರಿಸಿದೆ.
ಕುಲ್ಸುಂ ಪ್ರಕಾರ ಆಕೆಗೆ ಕೆಲಸ ಕೊಟ್ಟ ವ್ಯಕ್ತಿ ಆಕೆಯನ್ನು ಮಸ್ಕತ್‍ನಲ್ಲಿರುವ ಸ್ಥಳೀಯ ಏಜೆಂಟ್‌‍ಗೆ ಒಪ್ಪಿಸಿದ್ದರು.ಆತ ಈಕೆಯನ್ನು ಮನೆಗೆ ಕರೆದೊಯ್ದಿದ್ದ.ಆ ಏಜೆಂಟ್ ಆಕೆಯನ್ನು ಮನೆಯಲ್ಲಿ ಕಿರುಕುಳ ನೀಡಿದ್ದು ಮಾತ್ರವಲ್ಲದೆ ಆಹಾರ ನೀಡದೆ 10 ದಿನ ಕೋಣೆಯಲ್ಲಿ ಕೂಡಿ ಹಾಕಿದ್ದ. ಆಮೇಲೆ ನಾನು ಭಾರತೀಯ ರಾಯಭಾರಿ ಕಚೇರಿ ಮೊರೆ ಹೋದೆ.ರಾಯಭಾರಿ ಕಚೇರಿಯಲ್ಲಿ ನನ್ನನ್ನು ನಾಲ್ಕು ತಿಂಗಳು ಇರಿಸಿದರು.ಅಲ್ಲಿ ನಾನು ನನ್ನ ಮಗಳನ್ನು ಸಂಪರ್ಕಿಸಿ ಅವಳಿಗೆ ವಿಷಯ ತಿಳಿಸಿದೆ ಎಂದಿದ್ದಾರೆ ಕುಲ್ಸುಂ ಬಾನು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.