ADVERTISEMENT

I-PAC row: ಮಮತಾ ದೂರಿನ ಬೆನ್ನಲ್ಲೇ ಜಾರಿ ನಿರ್ದೇಶನಾಲಯದ ವಿರುದ್ಧ ಎಫ್‌ಐಆರ್

ಪಿಟಿಐ
Published 9 ಜನವರಿ 2026, 12:39 IST
Last Updated 9 ಜನವರಿ 2026, 12:39 IST
<div class="paragraphs"><p>ಮಮತಾ ಬ್ಯಾನರ್ಜಿ</p></div>

ಮಮತಾ ಬ್ಯಾನರ್ಜಿ

   

ಕೃಪೆ: ಪಿಟಿಐ

ಕೋಲ್ಕತ್ತ: ರಾಜಕೀಯ ಸಲಹಾ ಸಂಸ್ಥೆ 'ಐ–ಪ್ಯಾಕ್‌' ಕಚೇರಿ ಹಾಗೂ ಅದರ ಮುಖ್ಯಸ್ಥ ಪ್ರತೀಕ್‌ ಜೈನ್‌ ಅವರ ನಿವಾಸದ ಮೇಲೆ ಜಾರಿ ನಿರ್ದೇಶನಾಲಯ (ಇ.ಡಿ.) ನಡೆಸಿರುವ ದಾಳಿಗೆ ಸಂಬಂಧಿಸಿದಂತೆ ತೃಣ ಮೂಲ ಕಾಂಗ್ರೆಸ್‌ ಮುಖ್ಯಸ್ಥೆ ಮಮತಾ ಬ್ಯಾನರ್ಜಿ ಶುಕ್ರವಾರ ದೂರು ದಾಖಲಿಸಿದ್ದಾರೆ.

ADVERTISEMENT

ಮಮತಾ ನೀಡಿರುವ ದೂರಿನನ್ವಯ ಕೋಲ್ಕತ್ತ ಹಾಗೂ ಬಿಧನ್‌ನಗರ ಠಾಣೆಗಳಲ್ಲಿ ಪ್ರತ್ಯೇಕ ಎಫ್‌ಐಆರ್‌ಗಳು ದಾಖಲಾಗಿದ್ದು, ತನಿಖೆ ಆರಂಭವಾಗಿದೆ.

ಲೌಡಾನ್‌ ರಸ್ತೆಯಲ್ಲಿರುವ ಜೈನ್‌ ಅವರ ನಿವಾಸ ಹಾಗೂ ಸಾಲ್ಟ್‌ ಲೇಕ್‌ ಕಚೇರಿ ಮೇಲೆ ಗುರುವಾರ ಇ.ಡಿ. ದಾಳಿ ನಡೆದಿತ್ತು. ಜೈನ್ ಅವರು ಟಿಎಂಸಿ ಐ.ಟಿ ಸೆಲ್‌ನ ಮುಖ್ಯಸ್ಥರೂ ಹೌದು.

ಇ.ಡಿ. ಕಾರ್ಯಾಚರಣೆ ವೇಳೆ ಖುದ್ದಾಗಿ ಭೇಟಿ ನೀಡಿದ ಸಿಎಂ, ಪ್ರಮುಖ ದಾಖಲೆಗಳು ಮತ್ತು ಎಲೆಕ್ಟ್ರಾನಿಕ್‌ ಸಾಧನೆಗಳನ್ನು ಸ್ಥಳದಿಂದ ತೆಗೆದುಹಾಕಿದ್ದಾರೆ ಎನ್ನಲಾಗಿದೆ. ಈ ನಾಟಕೀಯ ಬೆಳವಣಿಗೆ ಬೆನ್ನಲ್ಲೇ, ದಾಖಲಾಗಿರುವ ದೂರುಗಳು ಮತ್ತು ಇ.ಡಿ. ವಿರುದ್ಧ ಕಲ್ಕತ್ತ ಹೈಕೋರ್ಟ್‌ಗೆ ಟಿಎಂಸಿ ಸಲ್ಲಿಸಿರುವ ಮೇಲ್ಮನವಿಯು ಸಂಘರ್ಷವನ್ನು ಮತ್ತೊಂದು ಹಂತಕ್ಕೆ ಕೊಂಡೊಯ್ದಿದೆ.

ಮಮತಾ ಅವರು, ಇ.ಡಿ ಅಧಿಕಾರಿಗಳು ಹಾಗೂ ಸಿಆರ್‌ಪಿಎಫ್‌ ಸಿಬ್ಬಂದಿ ವಿರುದ್ಧ ಷೇಕ್ಸ್‌ಪಿಯರ್‌ ಸರಾನಿ ಪೊಲೀಸ್‌ ಠಾಣೆಯಲ್ಲಿ ಮತ್ತು ಎಲೆಕ್ಟ್ರಾನಿಕ್ ಕಾಂಪ್ಲೆಕ್ಸ್‌ನಲ್ಲಿ ತನಿಖೆ ನಡೆಸುತ್ತಿದ್ದ ಇ.ಡಿ. ತನಿಖಾಧಿಕಾರಿ ವಿರುದ್ಧ ಬಿಧಾನನಗರ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.