ADVERTISEMENT

ಆರ್‌ಕೆಎಸ್‌ ಬದೌರಿಯಾ ವಾಯುಪಡೆ ಮುಖ್ಯಸ್ಥ

​ಪ್ರಜಾವಾಣಿ ವಾರ್ತೆ
Published 19 ಸೆಪ್ಟೆಂಬರ್ 2019, 19:34 IST
Last Updated 19 ಸೆಪ್ಟೆಂಬರ್ 2019, 19:34 IST
ಆರ್‌ಕೆಎಸ್‌ ಬದೌರಿಯಾ
ಆರ್‌ಕೆಎಸ್‌ ಬದೌರಿಯಾ   

ನವದೆಹಲಿ: ಏರ್‌ ಮಾರ್ಷಲ್‌ ರಾಕೇಶ್‌ ಕುಮಾರ್ ಸಿಂಗ್ ಬದೌರಿಯಾ ಅವರನ್ನು ವಾಯುಪಡೆಯ ಮುಂದಿನ ಮುಖ್ಯಸ್ಥರಾಗಿ ಕೇಂದ್ರ ಸರ್ಕಾರ ಗುರುವಾರ ನೇಮಕ ಮಾಡಿದೆ. ಹಾಲಿ ಮುಖ್ಯಸ್ಥ ಬಿ.ಎಸ್‌.ದನೋವಾ ಅವರು ಇದೇ 30 ರಂದು ನಿವೃತ್ತರಾಗಲಿದ್ದಾರೆ.

1980 ರಲ್ಲಿ ವಾಯುಪಡೆಯ ಯುದ್ಧ ವಿಮಾನ ಹಾರಾಟ ವಿಭಾಗದಲ್ಲಿ ಸೇವೆ ಆರಂಭಿಸಿದ ಬದೌರಿಯಾ ಅವರು ಸದ್ಯ ವಾಯುಪಡೆಯ ಉಪಮುಖ್ಯ‌ಸ್ಥರಾಗಿದ್ದಾರೆ.

ದನೋವಾ ಅವರೊಂದಿಗೆ ಬದೌರಿಯಾ ಅವರೂ ಇದೇ 30 ರಂದು ನಿವೃತ್ತಿಯಾಗಬೇಕಿತ್ತು. ಆದರೆ ಮುಂದಿನ ವಾಯುಪಡೆಯ ಮುಂದಿನ ಮುಖ್ಯಸ್ಥರಾಗಿ ಬಡ್ತಿ ನೀಡಿರುವುದರಿಂದ ಇನ್ನೂ ಎರಡು ವರ್ಷ ಸೇವೆ ಸಲ್ಲಿಸಲು ಅವರಿಗೆ ಅವಕಾಶ ದೊರೆತಿದೆ.

ADVERTISEMENT

ಬದೌರಿಯಾ ಅವರಿಗೆ 26 ರೀತಿಯ ಯುದ್ಧ ವಿಮಾನ ಮತ್ತು ಸರಕು ಸಾಗಣೆ ವಿಮಾನಗಳಲ್ಲಿ ಒಟ್ಟು 4,250 ಗಂಟೆ ಹಾರಾಟದ ಅನುಭವವಿದೆ.

ಉಪ ಮುಖ್ಯಸ್ಥರಾಗುವ ಮೊದಲು ಬೆಂಗಳೂರಿನ ತರಬೇತಿ ಕಮಾಂಡ್‌ನ ಏರ್‌ ಆಫೀಸರ್ ಕಮಾಂಡಿಂಗ್‌ ಮುಖ್ಯಸ್ಥರಾಗಿದ್ದರು.

ರಫೇಲ್‌ನಲ್ಲಿ ಪಾತ್ರ: ಬದೌರಿಯಾ ಅವರು ಫ್ರಾನ್ಸ್‌ ಜತೆ 36 ರಫೇಲ್‌ ಯುದ್ಧ ವಿಮಾನದ ವ್ಯವಹಾರದಲ್ಲೂ ಮಹತ್ವದ ಪಾತ್ರ ವಹಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.