ADVERTISEMENT

ಹರಿಯಾಣದ ಪಂಚಕುಲದಲ್ಲಿ ಯುದ್ಧವಿಮಾನ ಪತನ

ಪಿಟಿಐ
Published 7 ಮಾರ್ಚ್ 2025, 15:55 IST
Last Updated 7 ಮಾರ್ಚ್ 2025, 15:55 IST
<div class="paragraphs"><p>ಪತನಗೊಂಡ ಯುದ್ಧವಿಮಾನದಲ್ಲಿದ್ದ ಪೈಲಟ್‌</p></div>

ಪತನಗೊಂಡ ಯುದ್ಧವಿಮಾನದಲ್ಲಿದ್ದ ಪೈಲಟ್‌

   

  – ಪಿಟಿಐ ಚಿತ್ರ

ಚಂಡೀಗಢ: ಭಾರತೀಯ ವಾಯಪಡೆಯ ಯುದ್ಧವಿಮಾನವೊಂದು ಹರಿಯಾಣದ ಪಂಚಕುಲ ಜಿಲ್ಲೆಯಲ್ಲಿ ಶುಕ್ರವಾರ ಪತನಗೊಂಡಿದೆ.

ADVERTISEMENT

‘ಪೈಲಟ್‌ ಸುರಕ್ಷಿತವಾಗಿದ್ದಾರೆ. ಅಪಾಯದ ಮುನ್ಸೂಚನೆ ಸಿಕ್ಕ ತಕ್ಷಣ ವಿಮಾನವನ್ನು ವಸತಿ ಪ್ರದೇಶದಿಂದ ದೂರಕ್ಕೆ ಹಾರಿಸಿದ್ದರಿಂದ ಜನರಿಗೆ ಯಾವುದೇ ತೊಂದರೆ ಮತ್ತು ಹಾನಿ ಸಂಭವಿಸಿಲ್ಲ’ ಎಂದು ಪೊಲೀಸರು ಹೇಳಿದ್ದಾರೆ.

‘ದೈನಂದಿನ ತರಬೇತಿ ಹಾರಾಟದ ವೇಳೆ ತಾಂತ್ರಿಕ ದೋಷದಿಂದಾಗಿ ಅವಘಡ ಸಂಭವಿಸಿದೆ. ಘಟನೆಯ ಬಗ್ಗೆ ತನಿಖೆಗೆ ಆದೇಶಿಸಲಾಗಿದೆ’ ಎಂದು ಭಾರತೀಯ ವಾಯುಪಡೆ ತಿಳಿಸಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.