ADVERTISEMENT

ರಾಜಸ್ಥಾನ | ವಾಯುಪಡೆಯ ಜಾಗ್ವಾರ್ ಯುದ್ಧ ವಿಮಾನ ಪತನ: ಇಬ್ಬರು ಪೈಲಟ್‌ಗಳ ಸಾವು

ಪಿಟಿಐ
Published 9 ಜುಲೈ 2025, 8:59 IST
Last Updated 9 ಜುಲೈ 2025, 8:59 IST
<div class="paragraphs"><p>ಜಾಗ್ವಾರ್‌ ಯುದ್ಧ ವಿಮಾನವು&nbsp;ರಾಜಸ್ಥಾನದಲ್ಲಿ ಪತನಗೊಂಡು, ಹೊತ್ತಿ ಉರಿಯಿತು&nbsp; </p></div>

ಜಾಗ್ವಾರ್‌ ಯುದ್ಧ ವಿಮಾನವು ರಾಜಸ್ಥಾನದಲ್ಲಿ ಪತನಗೊಂಡು, ಹೊತ್ತಿ ಉರಿಯಿತು 

   

– ಪಿಟಿಐ ಚಿತ್ರ 

ಜೈಪುರ/ನವದೆಹಲಿ: ಭಾರತೀಯ ವಾಯಪಡೆಯ (ಐಎಎಫ್‌) ಜಾಗ್ವಾರ್ ತರಬೇತಿ ವಿಮಾನವು ರಾಜಸ್ಥಾನದ ಚುರೂ ಜಿಲ್ಲೆಯಲ್ಲಿ ಬುಧವಾರ ಪತನಗೊಂಡಿದ್ದು, ಇಬ್ಬರು ಪೈಲಟ್‌ಗಳು ಮೃತಪಟ್ಟಿದ್ದಾರೆ.

ADVERTISEMENT

‘ದೈನಂದಿನ ತರಬೇತಿ ವೇಳೆ ವಿಮಾನ ಪತನಗೊಂಡಿದ್ದು, ಅಪಘಾತದಲ್ಲಿ ಇಬ್ಬರು ಪೈಲಟ್‌ಗಳು ಮೃತಪಟ್ಟಿದ್ದಾರೆ ಮತ್ತು ನಾಗರಿಕ ಆಸ್ತಿ–ಪಾಸ್ತಿಗಳಿಗೆ ಯಾವುದೇ ಹಾನಿಯಾಗಿಲ್ಲ. ಅಪಘಾತಕ್ಕೆ ಕಾರಣವೇನೆಂದು ತಿಳಿಯಲು ತನಿಖಾ ಸಮಿತಿಯನ್ನು ರಚಿಸಲಾಗಿದೆ’ ಎಂದು ಐಎಎಫ್‌ ತನ್ನ ಹೇಳಿಕೆಯಲ್ಲಿ ತಿಳಿಸಿದೆ.

ಭಾನೋಡಾ ಗ್ರಾಮದ ಕೃಷಿ ಭೂಮಿಯಲ್ಲಿ ಮಧ್ಯಾಹ್ನ 1.25ರ ಸುಮಾರಿಗೆ ವಿಮಾನ ಪತನಗೊಂಡಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.