ADVERTISEMENT

Rare Blood Groups: ವಿರಳ ಗುಂಪಿನ ರಕ್ತದಾನಿಗಳ ‘ರಿಜಿಸ್ಟ್ರಿ’ ಸಿದ್ಧ

​ಪ್ರಜಾವಾಣಿ ವಾರ್ತೆ
Published 21 ಜೂನ್ 2025, 13:55 IST
Last Updated 21 ಜೂನ್ 2025, 13:55 IST
.
.   

ನವದೆಹಲಿ: ಭಾರತೀಯ ವೈದ್ಯಕೀಯ ಸಂಶೋಧನಾ ಸಂಸ್ಥೆಯ (ಐಸಿಎಂಆರ್) ಸಹಯೋಗದಲ್ಲಿ ನ್ಯಾಷನಲ್‌ ಇನ್‌ಸ್ಟಿಟ್ಯೂಟ್‌ ಆಫ್‌ ಇಮ್ಯುನೊಹಿಮಟಾಲಜಿಯು (ಎನ್‌ಐಐಎಚ್‌) ವಿರಳ ಗುಂಪಿನ ರಕ್ತದಾನಿಗಳ ರಿಜಿಸ್ಟ್ರಿಯನ್ನು ರಚಿಸಿದೆ.

ರಕ್ತದ ಲಭ್ಯತೆ ಬಗ್ಗೆ ಮಾಹಿತಿ ನೀಡುವ ‘ಇ–ರಕ್ತಕೋಶ’ ಆನ್‌ಲೈನ್‌ ವೇದಿಕೆಯಲ್ಲಿ ಈ ವಿರಳ ಗುಂಪಿನ ರಕ್ತದಾನಿಗಳ ‘ರಿಜಿಸ್ಟ್ರಿ’ಯೂ ಲಭ್ಯವಾಗುವಂತೆ ಮಾಡಲು ಆರೋಗ್ಯ ಸೇವೆಗಳ ಮಹಾನಿರ್ದೇಶಕರೊಂದಿಗೆ ಮಾತುಕತೆ ನಡೆಸಲಾಗುತ್ತಿದೆ ಎಂದು ಐಸಿಎಂಆರ್‌ನ ಸಿಆರ್‌ಎಚ್‌ಸಿಎಂ ನಿರ್ದೇಶಕಿ ಡಾ.ಮನೀಶಾ ಮಡಕೈಕರ್‌ ತಿಳಿಸಿದ್ದಾರೆ.

ಯಾರ್‍ಯಾರಿಗೆ  ಉಪಯೋಗ?

ADVERTISEMENT
  • ವಿರಳ ರಕ್ತದ ಗುಂಪಿನ ರೋಗಿಗಳು

  • ಥಲಸ್ಸೆಮಿಯಾ ರೋಗಿಗಳು

  • ಕುಡುಗೋಲು ಕಣ ರಕ್ತಹೀನತೆ (ಸಿಕಲ್ ಸೆಲ್‌)ಯಿಂದ ಬಳಲುತ್ತಿರುವವರು

ವಿರಳ ರಕ್ತದ ಗುಂಪುಗಳು

  • ಬಾಂಬೆ ರಕ್ತದ ಗುಂಪುಗಳು

  • ಎಬಿ ನೆಗೆಟಿವ್‌

  • ಎಬಿ ಪಾಸಿಟಿವ್‌

  • ಎ ನೆಗೆಟಿವ್‌

  • ಬಿ ನೆಗೆಟಿವ್

  • ಒ ನೆಗೆಟಿವ್‌

4000 – ಭಾರತದಲ್ಲಿರುವ ಪರವಾನಗಿ ಪಡೆದ ರಕ್ತನಿಧಿ ಕೇಂದ್ರಗಳ ಸಂಖ್ಯೆ

27 – ರಾಷ್ಟ್ರೀಯ ವಿರಳ ಗುಂಪಿನ ರಕ್ತದಾನಿಗಳ ರಿಜಿಸ್ಟ್ರಿ ಹೊಂದಿರುವ ದೇಶಗಳು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.