ನವದೆಹಲಿ: ಭಾರತೀಯರಲ್ಲಿ ಉಪ್ಪು ತಿನ್ನುವುದು ಹೆಚ್ಚುತ್ತಿದೆ. ಹೀಗಾಗಿ, ತಮಗೆ ಅರಿವಿಲ್ಲದಂತೆಯೇ ಅವರು ಹಲವು ರೋಗಗಳಿಗೆ ತುತ್ತಾಗುತ್ತಿದ್ದಾರೆ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಪರಿಷತ್ತಿನ (ಐಸಿಎಂಆರ್) ಅಧ್ಯಯನ ಹೇಳುತ್ತದೆ.
ಅಗತ್ಯಕ್ಕಿಂತ ಹೆಚ್ಚು ಉಪ್ಪು ತಿನ್ನುವುದರಿಂದ ಅಧಿಕ ರಕ್ತದೊತ್ತಡ, ಪಾರ್ಶ್ವವಾಯು, ಹೃದ್ರೋಗ, ಮೂತ್ರಪಿಂಡ ತೊಂದರೆಗಳು ಕಾಣಿಸಿಕೊಳ್ಳುವ ಅಪಾಯ ಹೆಚ್ಚಿದೆ ಎಂದು ಐಸಿಎಂಆರ್‌ನ ರಾಷ್ಟ್ರೀಯ ಸಾಂಕ್ರಾಮಿಕ ರೋಗವಿಜ್ಞಾನ ಸಂಸ್ಥೆ (ಎನ್‌ಐಇ) ವಿಜ್ಞಾನಿಗಳು ಎಚ್ಚರಿಸಿದ್ದಾರೆ.
ವಿವಿಧ ಆರೋಗ್ಯ ಸಮಸ್ಯೆಗಳು ಬಾರದಂತೆ ತಡೆಯುವ ಸಂಬಂಧ ಉಪ್ಪು ಸೇವನೆ ಕಡಿಮೆಗೊಳಿಸುವುದು ಹೇಗೆ ಎಂಬ ಬಗ್ಗೆ ವಿಜ್ಞಾನಿಗಳು ಅಧ್ಯಯನ ಕೈಗೊಂಡಿದ್ದಾರೆ.
ವಿಶ್ವ ಆರೋಗ್ಯ ಸಂಸ್ಥೆ ಶಿಫಾರಸಿನಂತೆ, ಒಬ್ಬ ವ್ಯಕ್ತಿ ದಿನಕ್ಕೆ 5 ಗ್ರಾಮ್‌ಗಿಂತ ಕಡಿಮೆ ಉಪ್ಪು ಸೇವಿಸಬೇಕು. ದೇಶದ ನಗರ ಪ್ರದೇಶ ನಿವಾಸಿಗಳು ದಿನಕ್ಕೆ 9.2 ಗ್ರಾಂ ಉಪ್ಪು ತಿಂದರೆ, ಗ್ರಾಮೀಣ ಭಾಗದಲ್ಲಿ ಇದರ ಪ್ರಮಾಣ 5.6 ಗ್ರಾಂ.
ಸೋಡಿಯಂ ಬದಲಾಗಿ ಪೊಟ್ಯಾಶಿಯಂ ಅಥವಾ ಮ್ಯಾಗ್ನೇಶಿಯಂ ಅಂಶವಿರುವ ಲವಣಗಳ ಬಳಕೆಯೇ ಇದಕ್ಕೆ ಪರ್ಯಾಯ ಎಂದು ಎನ್‌ಐಇ ಹಿರಿಯ ವಿಜ್ಞಾನಿ ಡಾ.ಶರಣ್ ಮುರಳಿ ಹೇಳುತ್ತಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.