ADVERTISEMENT

ಆಟೋಮೊಬೈಲ್‌ ವಲಯ ಸಂಕಷ್ಟದಲ್ಲಿದ್ದರೆ... ಟ್ರಾಫಿಕ್‌ ಜಾಮ್‌ ಏಕೆ: ಬಿಜೆಪಿ ಸಂಸದ

ಆಟೊಮೊಬೈಲ್‌ ಸಂಕಷ್ಟ

​ಪ್ರಜಾವಾಣಿ ವಾರ್ತೆ
Published 5 ಡಿಸೆಂಬರ್ 2019, 14:39 IST
Last Updated 5 ಡಿಸೆಂಬರ್ 2019, 14:39 IST
   

ನವದೆಹಲಿ:ಒಂದು ವೇಳೆ ದೇಶದಲ್ಲಿ ಆಟೋಮೊಬೈಲ್‌ ವಲಯ ಸಂಕಷ್ಟದಲ್ಲಿದ್ದರೆ, ಟ್ರಾಫಿಕ್‌ ಜಾಮ್‌ ಏಕೆ ಆಗುತ್ತಿದೆಎಂದು ಬಿಜೆಪಿ ಸಂಸದ ವೀರೇಂದ್ರ ಸಿಂಗ್‌ ಮಸ್ತ್ ಅವರು ಸಂಸತ್‌ ಕಲಾಪದಲ್ಲಿ ಕೇಳುವ ಮೂಲಕ ಅಚ್ಚರಿ ಮೂಡಿಸಿದ್ದಾರೆ.

ದೇಶದಲ್ಲಿ ಆಟೋಮೊಬೈಲ್‌ ವಲಯವು ಸಂಕಷ್ಟದಲ್ಲಿ ಇದೆ ಎಂದು ಹೇಳುತ್ತಿರುವ ವಿರೋಧ ಪಕ್ಷಗಳು ಕೇಂದ್ರ ಸರ್ಕಾರದ ಹೆಸರಿಗೆ ಮಸಿ ಬಳಿಯುವ ಕೆಲಸದಲ್ಲಿ ತೊಡಗಿವೆ ಎಂದು ವೀರೇಂದ್ರ ಸಿಂಗ್‌ ಹೇಳಿದ್ಧಾರೆ.

ಗುರುವಾರ ಸಂಸತ್‌ ಕಲಾಪ ಉದ್ದೇಶಿಸಿ ಮಾತನಾಡಿದ ಅವರು, ’‍ದೇಶದ ಆಟೋಮೊಬೈಲ್‌ ವಲಯವು ಸಂಕಷ್ಟ ಎದುರಿಸುತ್ತಿದೆ ಎಂದು ವಿರೋಧ ಪಕ್ಷಗಳು ಹೇಳುತ್ತಿವೆ. ಇದು ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಹೆಸರನ್ನು ಹಾಳುಮಾಡುವ ಹುನ್ನಾರವಾಗಿದೆ. ಒಂದು ವೇಳೆ ಮಾರುಕಟ್ಟೆಯಲ್ಲಿ ವಾಹನ ಮಾರಾಟ ಕಡಿಮೆಯಾಗಿದ್ದರೆ, ದೇಶದ ನಗರಗಳರಸ್ತೆಗಳ ಮೇಲೆ ಟ್ರಾಫಿಕ್‌ ಜಾಮ್‌ ಏಕೆ ಆಗುತ್ತಿತ್ತು?‘ ಎಂದು ಕೇಳಿದ್ದಾರೆ.

ADVERTISEMENT

ಅಂಕಿ–ಸಂಖ್ಯೆಗಳ ಪ್ರಕಾರ, ಭಾರತೀಯ ಆಟೋಮೊಬೈಲ್‌ ವಲಯವು ಹಲವು ತಿಂಗಳಿಂದ ತೀವ್ರ ಸಂಕಷ್ಟಕ್ಕೆ ಒಳಗಾಗಿದ್ದು ದೃಢಪಟ್ಟಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.