ADVERTISEMENT

ಅಧಿಕಾರಕ್ಕೆ ಬಂದರೆ ರಾಜ್ಯಗಳ ಜತೆ ಇರುವ ನೀರು ಹಂಚಿಕೆ ಒಪ್ಪಂದ ರದ್ದು: ಅಕಾಲಿ ದಳ

ಪಿಟಿಐ
Published 19 ಆಗಸ್ಟ್ 2023, 4:43 IST
Last Updated 19 ಆಗಸ್ಟ್ 2023, 4:43 IST
ಸುಖ್‌ಬೀರ್‌ ಸಿಂಗ್‌ ಬಾದಲ್
ಸುಖ್‌ಬೀರ್‌ ಸಿಂಗ್‌ ಬಾದಲ್   

ಚಂಡೀಗಢ: 2027ರಲ್ಲಿ ಪಂಜಾಬ್‌ನಲ್ಲಿ ಶಿರೋಮಣಿ ಅಕಾಲಿ ದಳ ಅಧಿಕಾರಕ್ಕೆ ಬಂದರೆ, ಬೇರೆ ರಾಜ್ಯಗಳೊಂದಿಗೆ ಇರುವ ನದಿ ನೀರು ಹಂಚಿಕೆ ಒಪ್ಪಂದಗಳನ್ನೆಲ್ಲಾ ರದ್ದು ಮಾಡಲಾಗುವುದು ಎಂದು ಶಿರೋಮಣಿ ಅಕಾಲಿ ದಳದ ಅಧ್ಯಕ್ಷ ಸುಖ್‌ಬೀರ್‌ ಸಿಂಗ್‌ ಬಾದಲ್‌ ಹೇಳಿದ್ದಾರೆ.

‘2027ರಲ್ಲಿ ಶಿರೋಮಣಿ ಅಕಾಲಿದಳ ಅಧಿಕಾರಕ್ಕೆ ಬರುತ್ತಿದ್ದಂತೆಯೇ, ಪಂಜಾಬ್‌ ಸರ್ಕಾರ ಯಾವುದೇ ಸಮಯದಲ್ಲಿ, ಯಾವುದೇ ರಾಜ್ಯದೊಂದಿಗೆ ಮಾಡಿಕೊಂಡಿರುವ ನೀರು ಹಂಚಿಕೆ ಒಡಂಬಂಡಿಕೆಯನ್ನು ರದ್ದು ಮಾಡುತ್ತೇವೆ’ ಎಂದು ಅವರು ಶುಕ್ರವಾರ ಘೋಷಣೆ ಮಾಡಿದ್ದಾರೆ.

ಅಕ್ಕಪಕ್ಕದ ರಾಜ್ಯಗಳು, ಅದರಲ್ಲೂ ರಾಜಸ್ಥಾನಕ್ಕೆ ಪಂಜಾಬ್‌ನ ನೀರಿನ ಮೇಲೆ ಹಕ್ಕಿಲ್ಲ. ದುರದೃಷ್ಟವಶಾತ್‌ ನಮ್ಮ ಶೇ 50ರಷ್ಟು ನೀರು ರಾಜಸ್ಥಾನಕ್ಕೆ ಉಚಿತವಾಗಿ ಸಿಗುತ್ತಿದೆ ಎಂದು ಹೇಳಿದರು.

ADVERTISEMENT

‘ಹಿಮಾಚಲ ಪ್ರದೇಶದಲ್ಲಿ ಭಾರಿ ಮಳೆಯಾಗಿದ್ದರಿಂದ ಪಂಜಾಬ್‌ನಲ್ಲಿ ತೀವ್ರ ಪ್ರವಾಹ ಉಂಟಾಗಿದೆ. ನಮ್ಮ ಜನ, ಜಾನುವಾರು ಹಾಗೂ ಭೂಮಿಯ ರಕ್ಷಣೆಗೆ ನೆರೆಯ ಯಾವ ರಾಜ್ಯಗಳೂ ಕೂಡ ಹೆಚ್ಚಿನ ನೀರು ಪಡೆಯಲು ಬಂದಿಲ್ಲ. ಇದನ್ನೆಲ್ಲಾ ನಾವು ಸರಿಪಡಿಸುತ್ತೇವೆ. ಇದು ಪಂಜಾಬಿಗಳಿಗೆ ನಮ್ಮ ಬದ್ಧತೆ’ ಎಂದು ಜಲಂಧರ್‌ನಲ್ಲಿ ಅವರು ಮಾಧ್ಯಮದವರೊಂದಿಗೆ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.