ADVERTISEMENT

ಭೂಕಬಳಿಕೆ ಮಾಡಿ, ಮನೆ ನಿರ್ಮಿಸಿಕೊಂಡ ಆರೋಪ: ದೀಪಕ್‌ ವಿರುದ್ಧ ವಿಚಾರಣೆಗೆ SC ತಡೆ

​ಪ್ರಜಾವಾಣಿ ವಾರ್ತೆ
Published 24 ಸೆಪ್ಟೆಂಬರ್ 2025, 13:42 IST
Last Updated 24 ಸೆಪ್ಟೆಂಬರ್ 2025, 13:42 IST
<div class="paragraphs"><p>ಸುಪ್ರೀಂ ಕೋರ್ಟ್‌–ಪಿಟಿಐ ಚಿತ್ರ</p></div>

ಸುಪ್ರೀಂ ಕೋರ್ಟ್‌–ಪಿಟಿಐ ಚಿತ್ರ

   

ನವದೆಹಲಿ: ಕರ್ನಾಟಕದ ಅಕ್ರಮ ಗಣಿಗಾರಿಕೆಗೆ ಸಂಬಂಧಿಸಿದ ಮೇಲ್ವಿಚಾರಣಾ ಸಮಿತಿ ಮುಖ್ಯಸ್ಥ ದೀಪಕ್‌ ಶರ್ಮಾ ಅವರ ವಿರುದ್ಧದ ವಿಚಾರಣೆಗೆ ಸುಪ್ರೀಂ ಕೋರ್ಟ್‌ ತಡೆ ನೀಡಿದೆ.

50 ವರ್ಷಗಳ ಹಿಂದೆ ಭೂಕಬಳಿಕೆ ಮಾಡಿ, ಮನೆ ನಿರ್ಮಿಸಿಕೊಂಡ ಆರೋಪ ದೀಪಕ್‌ ಅವರ ಮೇಲಿದೆ. ಈ ಪ್ರಕರಣಕ್ಕೆ ಸಂಬಂಧಿಸಿ ಮುಖ್ಯ ನ್ಯಾಯಮೂರ್ತಿ ಬಿ.ಆರ್‌. ಗವಾಯಿ ಮತ್ತು ನ್ಯಾಯಮೂರ್ತಿ ಎಂ.ಎಂ. ಸುಂದರೇಶ್‌ ಅವರ ಪೀಠ ವಿಚಾರಣೆ ನಡೆಸಿತು.

ADVERTISEMENT

ಈ ಸಂಬಂಧ ಕೇಂದ್ರೀಯ ಉನ್ನತಾಧಿಕಾರ ಸಮಿತಿ (ಸಿಇಸಿ) ನೀಡಿದ ವರದಿಯ ಕುರಿತು ಪ್ರತಿಕ್ರಿಯಿಸುವಂತೆ ಕರ್ನಾಟಕದ ಮುಖ್ಯ ಕಾರ್ಯದರ್ಶಿ ಮತ್ತು ಬಿಬಿಎಂಪಿ (ಈಗಿನ ಹೆಸರು ಜಿಬಿಜಿಬಿ) ಆಯುಕ್ತರಿಗೆ ನ್ಯಾಯಾಲಯ ನೋಟಿಸ್ ನೀಡಿದೆ.

‘ಮೇಲ್ವಿಚಾರಣೆ ಸಮಿತಿಯ ಮೂಲಕ ದೀಪಕ್‌ ಅವರು ಉತ್ತಮ ಕೆಲಸ ಮಾಡುತ್ತಿದ್ದಾರೆ. ಇದರಿಂದಾಗಿ ಅವರ ಮೇಲೆ ಹಲವರಿಗೆ ದ್ವೇಷ ಭಾವನೆ ಇದೆ’ ಎಂದು ದೀಪಕ್‌ ಪರ ವಕೀಲರು ವಾದಿಸಿದರು. ನಾಲ್ಕು ವಾರಗಳ ಬಳಿಕ ವಿಚಾರಣೆ ನಡೆಸುವುದಾಗಿ ಪೀಠ ಹೇಳಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.