ADVERTISEMENT

Immigration Bill: ನೂತನ ವಲಸೆ ಮಸೂದೆ ರೂಪಿಸಿದ ಕೇಂದ್ರ ಸರ್ಕಾರ

ಪಿಟಿಐ
Published 16 ಮಾರ್ಚ್ 2025, 21:21 IST
Last Updated 16 ಮಾರ್ಚ್ 2025, 21:21 IST
<div class="paragraphs"><p>ವಲಸೆ</p></div>

ವಲಸೆ

   

(ಸಾಂಕೇತಿಕ ಚಿತ್ರ)

ಕೇಂದ್ರ ಸರ್ಕಾರವು ‘ವಲಸೆ ಮತ್ತು ವಿದೇಶಿಯರ ಮಸೂದೆ, 2025’ ಮಸೂದೆ ಅನ್ನು ಸಿದ್ಧಪಡಿಸಿದೆ. 1920ರ ‘ಪಾಸ್‌ಪೋರ್ಟ್‌ (ಭಾರತಕ್ಕೆ ಪ್ರವೇಶ) ಕಾಯ್ದೆ’, 1939ರ ‘ವಿದೇಶಿಯರ ನೋಂದಣಿ ಕಾಯ್ದೆ’, 1946ರ ‘ವಿದೇಶಿಯರ ಕಾಯ್ದೆ’ ಮತ್ತು 2000ರ ‘ವಲಸೆ (ಸಂಚಾರ ಸಾಧನ) ಕಾಯ್ದೆ’ಗಳ ಬದಲಿಗೆ ಈ ಮಸೂದೆಯನ್ನು ಕೇಂದ್ರ ರೂಪಿಸಿದೆ. ‘ನಾಲ್ಕೂ ಕಾಯ್ದೆಗಳಲ್ಲಿ ಇರುವ ಅಂಶಗಳನ್ನು ಈ ಮಸೂದೆ ಒಳಗೊಂಡಿದೆ. ನಿಯಮಗಳನ್ನು ಸರಳಗೊಳಿಸಲಾಗಿದೆ’ ಎಂದು ಸರ್ಕಾರ ಹೇಳಿದೆ. ಕೆಲವು ನಿಯಮಗಳಲ್ಲಿ ‘ನಿರ್ದಿಷ್ಟ ವರ್ಗದ ವಿದೇಶಿಯರು’ ಎಂಬ ಹೊಸ ವ್ಯಾಖ್ಯಾನವನ್ನು ಮಸೂದೆಯಲ್ಲಿ ಮಾಡಲಾಗಿದೆ. ಶಿಕ್ಷೆ ಮತ್ತು ದಂಡದ ಪ್ರಮಾಣವನ್ನು ಹೆಚ್ಚಿಸಲಾಗಿದೆ.

ಕೆಲವು ಮುಖ್ಯಾಂಶಗಳು

ಸೆಕ್ಷನ್‌ 5: ವಲಸೆ ಬ್ಯೂರೊ ಸ್ಥಾಪನೆ

ಸೆಕ್ಷನ್‌ 7: ನಿರ್ದಿಷ್ಟ ವರ್ಗದ ವಿದೇಶಿಯರು ಭಾರತವನ್ನು ಪ್ರವೇಶಿಸದಂತೆ ತಡೆಯುವ ಅಥವಾ ಅಂಥವರ ಪ್ರವೇಶವನ್ನು ನಿಷೇಧಿಸುವ ಆದೇಶವನ್ನು ಕೇಂದ್ರ ಸರ್ಕಾರ ಹೊರಡಿಸಬಹುದು. ಇಂಥ ವಿದೇಶಿಯರು ಯಾವಾಗ ಭಾರತವನ್ನು ಬಿಟ್ಟು ಹೊರಡಬೇಕು ಎಂಬುದನ್ನು ಸರ್ಕಾರವೇ ನಿರ್ಧರಿಸಲಿದೆ.

ADVERTISEMENT
  • ನಿರ್ದಿಷ್ಟ ವರ್ಗದ ವಿದೇಶಿಯರಿಗೆ ಕೆಲವು ನಿರ್ದಿಷ್ಟ ಸಮಯದಲ್ಲಿ ಕೆಲವು ನಿರ್ದಿಷ್ಟ ಸೂಚನೆಗಳನ್ನು ಕೇಂದ್ರ ನೀಡಬಹುದು. ಇಂಥವರು ಸರ್ಕಾರವು ಕೇಳಿದ ವಿವರಗಳನ್ನು ನೀಡಬೇಕಾಗುತ್ತದೆ. ಅಗತ್ಯ ಬಿದ್ದರೆ ವಿಚಾರಣೆಗೆ ಒಳಗಾಗಬೇಕಾಗುತ್ತದೆ. ನಿರ್ದಿಷ್ಟ ಸ್ಥಳದಲ್ಲಿಯೇ ವಾಸ ಮಾಡುವಂತೆ ಸರ್ಕಾರ ಸೂಚಿಸಬಹುದು. ಅವರ ಸಂಚಾರಕ್ಕೂ ನಿರ್ಬಂಧ ಹೇರಬಹುದು.

  • ಇವರು ತಮ್ಮ ಬಯೋಮೆಟ್ರಿಕ್‌ ವಿವರಗಳು, ಛಾಯಾಚಿತ್ರ, ಕೈಬರಹ ಮತ್ತು ಸಹಿಯ ಮಾದರಿಯನ್ನು ನೀಡಬೇಕಾಗುತ್ತದೆ. ಅಧಿಕಾರಿಗಳು ಬಯಸಿದರೆ ವೈದ್ಯಕೀಯ ಪರೀಕ್ಷೆಗೂ ಒಳಗಾಗಬೇಕಾಗುತ್ತದೆ. ಸರ್ಕಾರ ಸೂಚಿದರೆ, ನಿರ್ದಿಷ್ಟ ಜನರೊಂದಿಗೆ ಮಾತುಕತೆ ಅಥವಾ ಅವರೊಂದಿಗೆ ಯಾವುದೇ ಚಟುವಟಿಕೆಗಳಲ್ಲಿ ಭಾಗವಹಿಸುವಂತಿಲ್ಲ

ಸೆಕ್ಷನ್‌ 8,9,10: ವಿದೇಶಿಯರು ತಂಗಿರುವ ಸ್ಥಳಗಳ ಮಾಲೀಕರು ಅವರ ಕುರಿತು ಸರ್ಕಾರಕ್ಕೆ ಮಾಹಿತಿ ನೀಡುವುದು ಕಡ್ಡಾಯ. ವಿಶ್ವವಿದ್ಯಾಲಯಗಳು, ಶೈಕ್ಷಣಿಕ ಸಂಸ್ಥೆಗಳು, ಆಸ್ಪತ್ರೆಗಳು ಕೂಡ ವಿದೇಶಿಯರ ಮಾಹಿತಿಯನ್ನು ನೀಡಬೇಕು

ಶಿಕ್ಷೆ ಪ್ರಮಾಣ

ಸೆಕ್ಷನ್‌ 21: ನಕಲಿ ದಾಖಲೆಗಳ ಮೂಲಕ ವಿದೇಶಿಯರು ಭಾರತವನ್ನು ಪ್ರವೇಶಿಸಿದರೆ ಐದು ವರ್ಷ ಜೈಲು ಅಥವಾ ₹5 ಲಕ್ಷಗಳವರೆಗೆ ದಂಡ

ಸೆಕ್ಷನ್‌ 22: ಭಾರತವನ್ನು ಪ್ರವೇಶಿಸಲು, ಇಲ್ಲಿಯೇ ಉಳಿದುಕೊಳ್ಳಲು ಅಥವಾ ಭಾರತದಿಂದ ಹೊರಹೋಗಲು ನಕಲಿ ಪಾಸ್‌ಪೋರ್ಟ್‌, ವೀಸಾವನ್ನು ಬಳಸಿದರೆ ಮತ್ತು ಈ ಅಕ್ರಮಕ್ಕಾಗಿ ನಕಲಿ ದಾಖಲೆಗಳನ್ನು ಸೃಷ್ಟಿ ಮಾಡಿದರೆ, ಅಂಥವರಿಗೆ ಕನಿಷ್ಠ 2 ವರ್ಷದಿಂದ 7 ವರ್ಷಗಳವರೆಗೆ ಜೈಲು ಶಿಕ್ಷೆ. ಇಲ್ಲವೇ ₹1 ಲಕ್ಷದಿಂದ ₹10 ಲಕ್ಷದವರೆಗೆ ದಂಡ

ಸೆಕ್ಷನ್‌ 28: ಈ ಕಾಯ್ದೆಯಲ್ಲಿ ಹೇಳಲಾಗಿರುವ ನಿಯಮಗಳ ಪರಿಣಾಮಕಾರಿ ಅನುಷ್ಠಾನಕ್ಕೆ ಕೇಂದ್ರ ಸರ್ಕಾರವು ರಾಜ್ಯ ಸರ್ಕಾರಗಳಿಗೆ ಅಥವಾ ತಮ್ಮ ಅಧಿಕಾರಿಗಳಿಗೆ ಸೂಚಿಸಬಹುದು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.