ADVERTISEMENT

ಸೀಟು, ದಾಖಲಾತಿ ನಡುವೆ ಅಂತರ: ಆರ್‌ಟಿಇ ಕಾಯಿದೆ ಜಾರಿಗೆ ಹಲವು ಅಡ್ಡಿ

ನಿಖರ ಮಾಹಿತಿ ಕೊರತೆ

ಪಿಟಿಐ
Published 21 ಫೆಬ್ರುವರಿ 2019, 20:08 IST
Last Updated 21 ಫೆಬ್ರುವರಿ 2019, 20:08 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ನಿಖರ ಮಾಹಿತಿ ಕೊರತೆ, ಮೌಲ್ಯಮಾಪನಕ್ಕೆ ಬೇಕಾದ ಇತ್ತೀಚಿನ ಮಾಹಿತಿ ಅಲಭ್ಯತೆ, ಆರ್ಥಿಕವಾಗಿ ಹಿಂದುಳಿದ ವರ್ಗದ ವಿದ್ಯಾರ್ಥಿಗಳ ಇಳಿಮುಖ, ಲಭ್ಯವಿರುವ ಸೀಟುಗಳ ಸಂಖ್ಯೆ ಮತ್ತು ದಾಖಲಾತಿ ಸಂಖ್ಯೆ ನಡುವಿನ ಅಂತರ ಹೀಗೆ ಹತ್ತು ಹಲವು ಕಡ್ಡಾಯ ಶಿಕ್ಷಣ ಹಕ್ಕು (ಆರ್‌ಟಿಇ) ಕಾಯಿದೆಯನ್ನು ಜಾರಿಗೊಳಿಸಲು ಅಡ್ಡಿಯಾಗಿವೆ.

ಉಚಿತ ಮತ್ತು ಕಡ್ಡಾಯ ಶಿಕ್ಷಣ ಕಾಯಿದೆ 2009 ರ ಪ್ರಕಾರ ಖಾಸಗಿ, ಅನುದಾನೇತರ, ಅಲ್ಪಸಂಖ್ಯಾತೇತರ ಮತ್ತು ಆರ್ಥಕವಾಗಿ ಹಿಂದುಳಿದ ಮತ್ತು ಸೌಲಭ್ಯ ವಂಚಿತ ಮಕ್ಕಳಿಗೆ ವಿಶೇಷ ವರ್ಗದ ಶಾಲೆಗಳಲ್ಲಿ ಶೇ 25 ರಷ್ಟು ಸೀಟುಗಳನ್ನು ಆಯ್ಕೆ ಮಾಡಿಕೊಳ್ಳುವ ಹಕ್ಕು ಮಕ್ಕಳು ಹೊಂದಿರುತ್ತಾರೆ.

‘ಬ್ರೈಟ್‌ ಸ್ಪಾಟ್‌: ಸ್ಟೇಟರ್‌ ಆಫ್‌ ಸೋಸಿಯಲ್‌ ಇನ್‌ಕ್ಲುಷನ್‌ ಥ್ರೂ ಆರ್‌ಟಿಇ’ ವರದಿಯಲ್ಲಿ ಈ ಮಾಹಿತಿ ಲಭ್ಯವಾಗಿದೆ. ಶಿಕ್ಷಣ ಕ್ಷೇತ್ರದಲ್ಲಿ ಕೆಲಸ ಮಾಡುವಲ್ಲಿ ಗುರುತಿಸಿಕೊಂಡಿರುವ ಸರ್ಕಾರೇತರ ಸಂಸ್ಥೆ ಇಂಡಸ್‌ ಆ್ಯಕ್ಷನ್‌ ನಡೆಸಿದ ಸಮೀಕ್ಷೆಯಲ್ಲಿ ಈ ಮಾಹಿತಿ ಕಲೆಹಾಕಲಾಗಿದೆ. ಇದಕ್ಕಾಗಿ 10 ಸಾವಿರ ಜನರನ್ನು ಸಮೀಕ್ಷೆ ಮಾಡಲಾಗಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.