
ಅಕೊಲಾ: ‘ಬಿಜೆಪಿಯು ‘ಒಡೆದು ಆಳುವ ನೀತಿ’ಯನ್ನು ಅಳವಡಿಸಿಕೊಂಡಿದೆ. ಪಕ್ಷದ ಮುಖಂಡರ ಬಾಯಿಯಿಂದ ‘ವಿಭಜಕ’ ಧ್ವನಿ ಹೊರಹೊಮ್ಮುತ್ತಿದೆ. ಹಿರಿಯ ಮುಖಂಡರು ಮೌನಕ್ಕೆ ಶರಣಾಗಿದ್ದಾರೆ’ ಎಂದು ಕಾಂಗ್ರೆಸ್‌ನ ರಾಜ್ಯಸಭಾ ಸದಸ್ಯ ಇಮ್ರಾನ್ ಪ್ರತಾಪ್‌ಗಢಿ ಹೇಳಿದ್ದಾರೆ.
‘ವಿಮಾನ ನಿಲ್ದಾಣಗಳ ಖಾಸಗೀಕರಣದಂತೆ, ಕೊಳೆಗೇರಿ ಅಭಿವೃದ್ಧಿ ಹೆಸರಲ್ಲಿ ಧಾರಾವಿಯನ್ನು ಮಾರಾಟ ಮಾಡಿದಂತೆ ಮುಂಬೈ ನಗರವನ್ನು ಮಾರಾಟ ಮಾಡಲು ಬಿಡುವುದಿಲ್ಲ’ ಎಂದು ಅವರು ಹೇಳಿದರು.
ಮುಂಬೈ ಮಹಾನಗರ ಪಾಲಿಕೆ ಚುನಾವಣೆಗೆ ಪೂರ್ವಭಾವಿಯಾಗಿ ಕಾಂಗ್ರೆಸ್ ನಡೆಸಿದ ಸಭೆಯಲ್ಲಿ ಭಾಗವಹಿಸಿದ ಬಳಿಕ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.
‘ಮುಂಬೈ ಮಹಾರಾಷ್ಟ್ರಕ್ಕೆ ಸೇರಿದೆ ಮತ್ತು ಯಾವಾಗಲೂ ಮಹಾರಾಷ್ಟ್ರದ ಭಾಗವಾಗಿಯೇ ಇರಲಿದೆ. ಆದರೆ, ಜನರನ್ನು ವಿಭಜಿಸುವುದರ ಮೇಲೆ, ಅವರನ್ನು ಶಿಕ್ಷಣದಿಂದ ವಂಚಿತರನ್ನಾಗಿ ಮಾಡುವುದರ ಮೇಲೆ ಬಿಜೆಪಿಯ ರಾಜಕೀಯ ಕೇಂದ್ರೀಕೃತವಾಗಿದೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.