ಮುಂಬೈ: ಮುಂಬೈನಲ್ಲಿ ಇದೇ ಮೊದಲ ಬಾರಿಗೆ ಭಾನುವಾರ ಕೋವಿಡ್ ಸಂಬಂಧಿತ ಸಾವುಗಳು ವರದಿಯಾಗಿಲ್ಲ.
ಮಹಾರಾಷ್ಟ್ರದಲ್ಲಿ ಭಾನುವಾರ 1715 ಕೋವಿಡ್ ಪ್ರಕರಣಗಳು, 29 ಸಾವುಗಳು ಸಂಭವಿಸಿವೆ.
ಬೃಹನ್‌ಮುಂಬೈ ಮುನ್ಸಿಪಲ್ ಕಾರ್ಪೊರೇಷನ್ ಮತ್ತು ಆರೋಗ್ಯ ಇಲಾಖೆ ಮಾಹಿತಿ ಪ್ರಕಾರ ವಾಣಿಜ್ಯ ನಗರಿ ಮುಂಬೈನಲ್ಲಿ ಕಳೆದ 24 ಗಂಟೆಗಳಲ್ಲಿ 367 ಪ್ರಕರಣಗಳು ವರದಿಯಾದವಾದರೂ, ಯಾವುದೇ ಸಾವು ಸಂಭವಿಸಿಲ್ಲ.
ದೇಶಕ್ಕೆ ಕೋವಿಡ್‌ನ ಮೂರನೇ ಅಲೆ ಬರಬಹುದು ಎಂಬ ಎಚ್ಚರಿಕೆ, ಭೀತಿಯ ನಡುವೆ ಇದು ಆಶಾದಾಯಕ ಬೆಳವಣಗೆ ಎನಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.