ADVERTISEMENT

ಭೂತಾನ್‌ ಸುಪ್ರೀಂ ಕೋರ್ಟ್ ಜತೆಗೆ ಕಾನೂನು ವೃತ್ತಿಪರರ ವಿನಿಮಯಕ್ಕೆ ಭಾರತ ಒಡಂಬಡಿಕೆ

​ಪ್ರಜಾವಾಣಿ ವಾರ್ತೆ
Published 5 ಜನವರಿ 2026, 14:47 IST
Last Updated 5 ಜನವರಿ 2026, 14:47 IST
<div class="paragraphs"><p>ಭಾರತದ ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್‌</p></div>

ಭಾರತದ ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್‌

   

ನವದೆಹಲಿ: ಭೂತಾನ್‌ ಸುಪ್ರೀಂ ಕೋರ್ಟ್‌ ಜತೆಗೆ ಯುವ ಕಾನೂನು ವೃತ್ತಿಪರರ ವಿನಿಮಯ ಕಾರ್ಯಕ್ರಮಕ್ಕೆ ಒಡಂಬಡಿಕೆ ಮಾಡಿಕೊಳ್ಳಲಾಗಿದೆ ಎಂದು ಭಾರತದ ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್‌ ಸೋಮವಾರ ಹೇಳಿದ್ದಾರೆ.

ಎರಡೂ ದೇಶಗಳ ನಡುವೆ ನ್ಯಾಯಾಂಗ ಸಹಕಾರವನ್ನು ಬಲಪಡಿಸುವ ಮತ್ತು ಸಾಂಸ್ಥಿಕ ಸಂಬಂಧವನ್ನು ವೃದ್ಧಿಸುವ ಗುರಿಯನ್ನು ಇದು ಹೊಂದಿದೆ ಎಂದು ಅವರು ತಿಳಿಸಿದ್ದಾರೆ.

ADVERTISEMENT

ಈ ಒಪ್ಪಂದದ ಅಡಿಯಲ್ಲಿ ಭೂತಾನ್‌ನ ಇಬ್ಬರು ‘ಲಾ ಕ್ಲರ್ಕ್‌’ಗಳನ್ನು ಮೂರು ತಿಂಗಳ ಅವಧಿಗೆ ಸುಪ್ರೀಂ ಕೋರ್ಟ್‌ನಲ್ಲಿ ನೇಮಿಸಿಕೊಳ್ಳಲಾಗುತ್ತದೆ. ಅವರಿಗೆ ಭಾರತದ ‘ಲಾ ಕ್ಲರ್ಕ್‌’ಗಳಿಗೆ ನೀಡುವಂತೆಯೇ ಗೌರವಧನ ನೀಡಲಾಗುತ್ತದೆ. ಅವರ ಪ್ರಯಾಣದ ವೆಚ್ಚವನ್ನು ಸುಪ್ರೀಂ ಕೋರ್ಟ್‌ ಭರಿಸುತ್ತದೆ. ಅಲ್ಲದೆ ಅವರನ್ನು ವಿವಿಧ ನ್ಯಾಯಾಲಯಗಳಲ್ಲಿ ಕೆಲಸ ಮಾಡಲು ನಿಯೋಜಿಸಲಾಗುತ್ತದೆ ಎಂದು ಸಿಜೆಐ ಮಾಹಿತಿ ನೀಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.