ನ್ಯೂಯಾರ್ಕ್: ‘ಎರಡು ದೇಶಗಳ ನಡುವೆ ಸಂಬಂಧ ಪುನರ್ ನಿರ್ಮಾಣದ ನಿಟ್ಟಿನಲ್ಲಿ ದೆಹಲಿ ಹಾಗೂ ಒಟ್ಟಾವದಲ್ಲಿ ಉಭಯ ರಾಷ್ಟ್ರಗಳು ಹೈ ಕಮೀಷನರ್‌ಗಳ ನೇಮಿಸಲು ಒಪ್ಪಿಗೆ ಸೂಚಿಸಿರುವುದು ಸ್ವಾಗತಾರ್ಹ ಹೆಜ್ಜೆಯಾಗಿದೆ’ ಎಂದು ಭಾರತದ ವಿದೇಶಾಂಗ ಸಚಿವ ಎಸ್.ಜೈಶಂಕರ್ ತಿಳಿಸಿದರು.
‘ನ್ಯೂಯಾರ್ಕ್‌ನಲ್ಲಿ ಸೋಮವಾರ ಬೆಳಿಗ್ಗೆ ಕೆನಡಾ ವಿದೇಶಾಂಗ ಸಚಿವೆ ಅನಿತಾ ಆನಂದ್ ಅವರ ಜೊತೆಗಿನ ಸಭೆಯು ಯಶಸ್ವಿಯಾಗಿತ್ತು. ರಾಜತಾಂತ್ರಿಕರ ನೇಮಕಾತಿಯ ಬಳಿಕ ಮುಂದಿನ ಕ್ರಮಗಳ ಕುರಿತು ಚರ್ಚಿಸಲಾಯಿತು. ಅನಿತಾ ಅವರನ್ನು ಭಾರತಕ್ಕೆ ಭೇಟಿ ನೀಡುವುದನ್ನು ಸ್ವಾಗತಿಸುತ್ತೇನೆ’ ಎಂದು ಜೈಶಂಕರ್ ‘ಎಕ್ಸ್’ನಲ್ಲಿ ಬರೆದಿದ್ದಾರೆ.
ಕೆನಡಾದಲ್ಲಿ ಭಾರತದ ಮುಂದಿನ ಹೈಕಮೀಷನರ್ ಆಗಿ ದಿನೇಶ್ ಪಟ್ನಾಯಕ್ ಅವರನ್ನು ನೇಮಿಸಿ ಕಳೆದ ಆಗಸ್ಟ್‌ನಲ್ಲಿ ಆದೇಶ ಹೊರಡಿಸಲಾಗಿತ್ತು. ದಿನೇಶ್ 1990ನೇ ಬ್ಯಾಚಿನ ಐಎಫ್‌ಎಸ್ ಅಧಿಕಾರಿಯಾಗಿದ್ದಾರೆ.
ಕೆನಡಾ ಕೂಡ, ಕಳೆದ ತಿಂಗಳು ಭಾರತದಲ್ಲಿನ ತನ್ನ ಹೈಕಮೀಷನರ್ ಅವರನ್ನು ನೇಮಕ ಮಾಡಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.