ADVERTISEMENT

ಭಾರತ–ಚೀನಾ ನಡುವೆ ಪರಸ್ಪರ ಸ್ವೀಕಾರಾರ್ಹ ನಿರ್ಣಯ ಕೈಗೊಳ್ಳಲು ಒಪ್ಪಿಗೆ

18ನೇ ಸುತ್ತಿನ ಮಿಲಿಟರಿ ಮಾತುಕತೆ

ಪಿಟಿಐ
Published 24 ಏಪ್ರಿಲ್ 2023, 17:46 IST
Last Updated 24 ಏಪ್ರಿಲ್ 2023, 17:46 IST
ಭಾರತ ಚೀನಾ
ಭಾರತ ಚೀನಾ   

ನವದೆಹಲಿ: ‘ಪರಸ್ಪರ ಸ್ವೀಕಾರಾರ್ಹವಾದ ನಿರ್ಣಯಗಳನ್ನು ಕೈಗೊಳ್ಳುವ ಮೂಲಕ ಪೂರ್ವ ಲಡಾಖ್‌ನ ಗಡಿ ವಿಚಾರಕ್ಕೆ ಸಂಬಂಧಿಸಿದಂತೆ ಬಾಕಿ ಉಳಿದಿರುವ ಸಮಸ್ಯೆಗಳನ್ನು ಸಾಧ್ಯವಾದಷ್ಟು ಬೇಗ ಪರಿಹರಿಸಿಕೊಳ್ಳಲು ಭಾರತ ಮತ್ತು ಚೀನಾ ನಿರ್ಧರಿಸಿವೆ. ಭಾನುವಾರ ನಡೆದಿದ್ದ ಉಭಯ ದೇಶಗಳ ನಡುವಣ 18ನೇ ಸುತ್ತಿನ ಉನ್ನತ ಮಟ್ಟದ ಮಿಲಿಟರಿ ಮಾತುಕತೆ ವೇಳೆ ಈ ನಿರ್ಣಯಕ್ಕೆ ಪರಸ್ಪರ ಒಪ್ಪಿಗೆ ಸೂಚಿಸಿವೆ’ ಎಂದು ವಿದೇಶಾಂಗ ಸಚಿವಾಲಯ ಸೋಮವಾರ ತಿಳಿಸಿದೆ.

‘ಪಶ್ಚಿಮ ವಲಯದ (ಪೂರ್ವ ಲಡಾಖ್‌) ವಾಸ್ತವ ನಿಯಂತ್ರಣ ರೇಖೆಗೆ (ಎಲ್‌ಎಸಿ) ಸಂಬಂಧಿಸಿದ ಬಿಕ್ಕಟ್ಟನ್ನು ಬೇಗ ಪರಿಹರಿಸಿಕೊಳ್ಳಲು ಒತ್ತು ನೀಡುವ ಸಂಬಂಧ ಸಭೆಯಲ್ಲಿ  ಚರ್ಚಿಸಲಾಗಿದೆ. ಪರಸ್ಪರ ಸಂಪರ್ಕದಲ್ಲಿರಲು, ಸೇನೆ ಹಾಗೂ ರಾಜತಾಂತ್ರಿಕ ಮಾರ್ಗದ ಮೂಲಕ ಸಮಸ್ಯೆ ಪರಿಹರಿಸಿಕೊಳ್ಳುವ ಕುರಿತೂ ಮಾತುಕತೆ ನಡೆದಿದೆ.  ದ್ವಿಪಕ್ಷೀಯ ಸಂಬಂಧದಲ್ಲಿ ಪ್ರಗತಿ ಸಾಧಿಸಲು ಇದರಿಂದ ಸಹಕಾರಿಯಾಗಲಿದೆ’ ಎಂದು ಸಚಿವಾಲಯದ ಪ್ರಕಟಣೆ ಹೇಳಿದೆ. 

‘ಪಶ್ಚಿಮ ವಲಯದಲ್ಲಿ ಭದ್ರತೆ ಮತ್ತು ಸ್ಥಿರತೆ ಕಾಪಾಡಿಕೊಳ್ಳಲು ಉಭಯ ಕಡೆಯವರು ಸಮ್ಮತಿ ಸೂಚಿಸಿದ್ದಾರೆ. ಗಡಿ ಬಿಕ್ಕಟ್ಟು ಬಗೆಹರಿಸಿಕೊಳ್ಳುವ ನಿಟ್ಟಿನಲ್ಲಿ ಉಭಯ ದೇಶಗಳ ನಾಯಕರು ಹಾಗೂ ವಿದೇಶಾಂಗ ಸಚಿವರುಗಳು ನೀಡಿದ್ದ ಮಾರ್ಗದರ್ಶನದ ಅನುಸಾರ ಮುಕ್ತ ಹಾಗೂ ಸವಿಸ್ತಾರವಾಗಿ ಮಾತುಕತೆ ನಡೆಸಲಾಗಿದೆ’ ಎಂದು ತಿಳಿಸಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.