ADVERTISEMENT

ಕಳೆದ 24 ಗಂಟೆಗಳಲ್ಲಿ ಗರಿಷ್ಠ ಪ್ರಮಾಣದ 8,48,728 ಕೋವಿಡ್-19 ಪರೀಕ್ಷೆ

ಏಜೆನ್ಸೀಸ್
Published 14 ಆಗಸ್ಟ್ 2020, 14:48 IST
Last Updated 14 ಆಗಸ್ಟ್ 2020, 14:48 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   
""

ನವದೆಹಲಿ: ಕಳೆದ 24 ಗಂಟೆಗಳಲ್ಲಿ ದಾಖಲೆಯ ಗರಿಷ್ಠ 8,48,728 ಪರೀಕ್ಷೆಗಳನ್ನು ನಡೆಸುವ ಮೂಲಕ ಭಾರತವು ಒಂದೇ ದಿನದಲ್ಲಿ ಅತಿ ಹೆಚ್ಚು ಕೋವಿಡ್-19 ಪರೀಕ್ಷೆಗಳೊಂದಿಗೆ ಹೊಸ ದಾಖಲೆ ಬರೆದಿದೆ. ಶುಕ್ರವಾರದ ವೇಳೆಗೆ ಒಟ್ಟಾರೆ 2,76,94,416 ಪರೀಕ್ಷೆಗಳನ್ನು ನಡೆಸಿರುವುದಾಗಿ ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ.

ಒಂದು ದೇಶದಲ್ಲಿ ಒಂದು ಮಿಲಿಯನ್ ಜನಸಂಖ್ಯೆಗೆ ದಿನಕ್ಕೆ 140 ಪರೀಕ್ಷೆಗಳನ್ನು ನಡೆಸಬೇಕು ಎಂದು ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್‌ಒ) ಸಲಹೆ ನೀಡಿದೆ.

ರಾಷ್ಟ್ರೀಯ ಸರಾಸರಿ 603 ಪರೀಕ್ಷೆಗಳು / ದಿನ / ಮಿಲಿಯನ್ ಜನಸಂಖ್ಯೆಗಾಗಿದ್ದರೆ, ಕೇಂದ್ರ ಮತ್ತು ರಾಜ್ಯಗಳು ಅಥವಾ ಕೇಂದ್ರಾಡಳಿತ ಪ್ರದೇಶಗಳ ಕೇಂದ್ರೀಕೃತ ಪ್ರಯತ್ನಗಳಿಂದಾಗಿ ಅವುಗಳಲ್ಲಿ 34 ಕಡೆಗಳಲ್ಲಿ ನಿಗದಿಗಿಂತಲೂ ಜಾಸ್ತಿ ಕೋವಿಡ್-19 ಪರೀಕ್ಷೆಯನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲಾಗಿದೆ.

ADVERTISEMENT

ಕೋವಿಡ್ ಪರೀಕ್ಷೆಗೆ ಸರ್ಕಾರಿ ವಲಯದ 958 ಮತ್ತು 493 ಖಾಸಗಿ ಲ್ಯಾಬ್‌ಗಳೊಂದಿಗೆ ಒಟ್ಟಾರೆ 1,451 ಪ್ರಯೋಗಾಲಯಗಳಿವೆ.

447 ಸರ್ಕಾರಿ ಮತ್ತು 302 ಖಾಸಗಿ ಲ್ಯಾಬ್‌ಗಳು ಸೇರಿದಂತೆ 749 ರಿಯಲ್-ಟೈಮ್ ಆರ್‌ಟಿ ಪಿಸಿಆರ್ ಆಧಾರಿತ ಪರೀಕ್ಷಾ ಲ್ಯಾಬ್‌ಗಳಿವೆ. 478 ಸರ್ಕಾರಿ ಮತ್ತು 108 ಖಾಸಗಿ ಲ್ಯಾಬ್‌ಗಳು ಸೇರಿದಂತೆ ದೇಶದಲ್ಲಿ ಒಟ್ಟಾರೆ 586 ಟ್ರೂನಾಟ್ ಆಧಾರಿತ ಪರೀಕ್ಷಾ ಪ್ರಯೋಗಾಲಯಗಳು ಕಾರ್ಯನಿರ್ವಹಿಸುತ್ತಿವೆ. ಅಲ್ಲದೆ 11 ಸರ್ಕಾರಿ ಪ್ರಯೋಗಾಲಯಗಳು ಮತ್ತು 83 ಖಾಸಗಿ ಪ್ರಯೋಗಾಲಯಗಳು ಸೇರಿದಂತೆ 116 ಸಿಬಿಎನ್‌ಎಟಿ (ಕಾರ್ಟ್ರಿಡ್ಜ್ ಆಧಾರಿತ ನ್ಯೂಕ್ಲಿಯಿಕ್ ಆ್ಯಸಿಡ್ ವರ್ಧನೆ ಪರೀಕ್ಷೆ) ಆಧಾರಿತ ಪರೀಕ್ಷಾ ಪ್ರಯೋಗಾಲಯಗಳಿವೆ ಎಂದು ಸಚಿವಾಲಯ ತಿಳಿಸಿದೆ.

ದೇಶದಲ್ಲಿ ಕಳೆದ 24 ಗಂಟೆಗಳಲ್ಲಿ 64,553 ಹೊಸ ಕೋವಿಡ್-19 ಪ್ರಕರಣಗಳು ಮತ್ತು 1,007 ಜನರು ಸಾವಿಗೀಡಾಗಿದ್ದಾರೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ತಿಳಿಸಿದೆ.

ಈ ಪೈಕಿ ದೇಶದಾದ್ಯಂತ ಸೋಂಕಿತರ ಸಂಖ್ಯೆ 24,61,191ಕ್ಕೆ ಏರಿಕೆಯಾಗಿದ್ದು, 6,61,595 ಸಕ್ರಿಯ ಪ್ರಕರಣಗಳಿವೆ. 17,51,556 ಜನರು ಗುಣಮುಖರಾಗಿ ಬಿಡುಗಡೆಯಾಗಿದ್ದರೆ, ಒಟ್ಟಾರೆ 48,040 ಜನರು ಮೃತಪಟ್ಟಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.