ADVERTISEMENT

ದಿನಕ್ಕೆ 1 ಲಕ್ಷ ಮಾದರಿ ಪರೀಕ್ಷೆ: ಕೇಂದ್ರ ಆರೋಗ್ಯ ಸಚಿವ ಹರ್ಷವರ್ಧನ್‌ ಮಾಹಿತಿ

ಸೋಂಕು ಪತ್ತೆ ಸಾಮರ್ಥ್ಯ ಹೆಚ್ಚಳ

ಏಜೆನ್ಸೀಸ್
Published 13 ಮೇ 2020, 20:00 IST
Last Updated 13 ಮೇ 2020, 20:00 IST
ಕೇಂದ್ರ ಆರೋಗ್ಯ ಸಚಿವ ಹರ್ಷವರ್ಧನ್‌
ಕೇಂದ್ರ ಆರೋಗ್ಯ ಸಚಿವ ಹರ್ಷವರ್ಧನ್‌    

ನವದೆಹಲಿ: ದೇಶದಲ್ಲಿ ಕೋವಿಡ್-‌19 ಪತ್ತೆ ಪರೀಕ್ಷಾ ಸಾಮರ್ಥ್ಯವನ್ನು ಹೆಚ್ಚಿಸಲಾಗಿದ್ದು, ದಿನಕ್ಕೆ 1 ಲಕ್ಷ ಮಾದರಿಗಳನ್ನು ಪರೀಕ್ಷೆಗೆ ಒಳಪಡಿಸುವ ಸೌಲಭ್ಯ ಹೊಂದಿದೆ ಎಂದು ಕೇಂದ್ರ ಆರೋಗ್ಯ ಸಚಿವ ಹರ್ಷವರ್ಧನ್‌ ಅವರು ತಿಳಿಸಿದ್ದಾರೆ.

ಬುಧವಾರ ಬೆಳಗಿನ ವೇಳೆಗೆ ಹೊಸದಾಗಿ ಕೋವಿಡ್‌-19 ದೃಢಪಟ್ಟ 3,525 ಪ್ರಕರಣಗಳು ವರದಿಯಾಗಿದ್ದವು. ಇದರ ಬೆನ್ನಲ್ಲೇ ಹರ್ಷವರ್ಧನ್‌ ಅವರು ಈ ಮಾಹಿತಿ ನೀಡಿದ್ದಾರೆ.

ಮಂಗಳವಾರ ಒಂದೇ ದಿನದಲ್ಲಿ ಸರ್ಕಾರದ 352 ಹಾಗೂ ಖಾಸಗಿಯ140 ಪ್ರಯೋಗಾಲಯಗಳ ಮೂಲಕ 94,708 ಮಾದರಿಗಳ ಪರೀಕ್ಷೆ ನಡೆಸಲಾಗಿತ್ತು.

ADVERTISEMENT

ಪಂಜಾಬ್‌ ಆರೋಗ್ಯ ಸಚಿವ ಬಿ.ಎಸ್.‌ ಸಿಧು ಜತೆಗೆ ವಿಡಿಯೊ ಕಾನ್ಫರೆನ್ಸ್‌ ಮೂಲಕ ಮಾತನಾಡಿದ ಸಚಿವ ಹರ್ಷವರ್ಧನ್‌ ಅವರು, 'ಬುಧವಾರ ಬೆಳಗಿನವರೆಗಿನ ಮಾಹಿತಿ ಪ್ರಕಾರ ದೇಶದಲ್ಲಿ 18.54 ಲಕ್ಷ ಮಾದರಿಗಳನ್ನು ಪರೀಕ್ಷೆಗೆ ಒಳಪಡಿಸಲಾಗಿದೆ' ಎಂದು ಹೇಳಿದ್ದಾರೆ.

ಪಂಜಾಬ್‌ನಲ್ಲಿ ಸೋಂಕು ದೃಢಪಟ್ಟಿರುವ 1,914 ಜನರಲ್ಲಿ 1,225 ಜನರು ಮಹಾರಾಷ್ಟ್ರದ ನಾಂದೇಡ್‌ ಹುಜೂರ್‌ ಸಾಹಿಬ್‌ ಗುರುದ್ವಾರದಿಂದ ಮರಳಿದವರಾಗಿದ್ದಾರೆ. ಗುರುದ್ವಾರದಿಂದ ಒಟ್ಟು 4,216 ಜನರು ಪಂಜಾಬ್‌ಗೆ ವಾಪಸಾಗಿದ್ದರು.

ಮಂಗಳವಾರದ ಮಾಹಿತಿ ಪ್ರಕಾರ, ಸೋಂಕು ದೃಢಪಟ್ಟವರಲ್ಲಿ ಶೇ 2.75 ಜನರು ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು, ಶೇ0.37 ಜನರ ಸ್ಥಿತಿ ಗಂಭೀರವಾಗಿದ್ದು, ಕೃತಕ ಉಸಿರಾಟ ವ್ಯವಸ್ಥೆಯಲ್ಲಿದ್ದರು. ಶೇ 1.89 ಜನರಿಗೆ ಆಮ್ಲಜನಕ ಪೂರೈಕೆ ಮಾಡಲಾಗುತ್ತಿತ್ತು ಎಂದು ತಿಳಿದುಬಂದಿದೆ.

'ಅಂಡಮಾನ್‌ ಮತ್ತು ನಿಕೊಬಾರ್‌ ದ್ವೀಪಗಳು, ಅರುಣಾಚಲ ಪ್ರದೇಶ, ದಾದ್ರಾ ಮತ್ತು ನಗರ್‌ ಹವೇಲಿ, ಗೋವಾ, ಛತ್ತೀಸಗಡ, ಲಡಾಖ್‌, ಮಣಿಪುರ, ಮೇಘಾಲಯ, ಮಿಜೋರಾಂನಲ್ಲಿ ಕಳೆದ24 ತಾಸಿನಲ್ಲಿ ಹೊಸದಾಗಿ ಸೋಂಕು ಪ್ರಕರಣಗಳು ವರದಿಯಾಗಿಲ್ಲ. ಸಿಕ್ಕಿಂ, ನಾಗಾಲ್ಯಾಂಡ್‌, ದಮನ್‌ ಮತ್ತು ದಿಯು, ಲಕ್ಷದ್ವೀಪದಲ್ಲಿ ಈವರೆಗೆ ಒಂದೂ ಪ್ರಕರಣ ವರದಿಯಾಗಿಲ್ಲ' ಎಂದುಸಚಿವರು ಹೇಳಿದ್ದಾರೆ.

***

ಪಂಜಾಬ್‌ಗೆ ಮರಳಲಿರುವ 20,521 ವಲಸೆ ಕಾರ್ಮಿಕರ ಮೇಲೆ ನಿಗಾ ಇರಿಸಬೇಕು

– ಹರ್ಷವರ್ಧನ್‌, ಕೇಂದ್ರ ಆರೋಗ್ಯ ಸಚಿವ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.