ADVERTISEMENT

₹67 ಸಾವಿರ ಕೋಟಿ ವೆಚ್ಚದ ಶಸ್ತ್ರಾಸ್ತ್ರ ಖರೀದಿಗೆ ಡಿಎಸಿ ಅಸ್ತು

ಪಿಟಿಐ
Published 5 ಆಗಸ್ಟ್ 2025, 16:07 IST
Last Updated 5 ಆಗಸ್ಟ್ 2025, 16:07 IST
   

ನವದೆಹಲಿ: ದೀರ್ಘ ಅವಧಿಗೆ ಹಾರಾಟ ಸಾಮರ್ಥ್ಯವುಳ್ಳ ಡ್ರೋನ್‌ಗಳು, ಕ್ಷಿಪಣಿಗಳ ಖರೀದಿ ಸೇರಿ ಅಂದಾಜು ₹67 ಸಾವಿರ ಕೊಟಿ ವೆಚ್ಚದಲ್ಲಿ ವಿವಿಧ ರಕ್ಷಣಾ ವ್ಯವಸ್ಥೆಗಳ ಖರೀದಿಗೆ ರಕ್ಷಣಾ ಖರೀದಿ ಪರಿಷತ್ತು (ಡಿಎಸಿ) ಮಂಗಳವಾರ ಅನುಮೋದನೆ ನೀಡಿದೆ.

ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ ಅಧ್ಯಕ್ಷತೆಯಲ್ಲಿ ನಡೆದ ಡಿಎಸಿ ಸಭೆಯಲ್ಲಿ ಈ ಖರೀದಿಗೆ ಅನುಮೋದನೆ ನೀಡಲಾಯಿತು ಎಂದು ರಕ್ಷಣಾ ಸಚಿವಾಲಯ ಪ್ರಕಟಣೆಯಲ್ಲಿ ತಿಳಿಸಿದೆ.

ಮೂರು ಸಶಸ್ತ್ರ ಪಡೆಗಳಿಗಾಗಿ ಕಡಿಮೆ ಎತ್ತರದಲ್ಲಿ ದೀರ್ಘಕಾಲ ಹಾರಾಡಬಲ್ಲ ಹಾಗೂ ದೂರದಿಂದ ನಿಯಂತ್ರಣ ವ್ಯವಸ್ಥೆಹೊಂದಿದ ಯುದ್ಧವಿಮಾನಗಳ (ಎಂಎಎಲ್‌ಇ– ಆರ್‌ಪಿಎ) ಖರೀದಿಗೂ ಆರಂಭಿಕ ಅನುಮೋದನೆ ನೀಡಲಾಗಿದೆ ಎಂದು ಸಚಿವಾಲಯ ತಿಳಿಸಿದೆ.

ADVERTISEMENT

‘ಎಂಎಎಲ್‌ಇ–ಆರ್‌ಪಿಎ’ಗಳು ಶಸ್ತ್ರಾಸ್ತ್ರಗಳು ಹಾಗೂ ಇತರ ಪರಿಕರಗಳನ್ನು ದೂರದ ಪ್ರದೇಶಗಳಿಗೆ ಕೊಂಡೊಯ್ಯುವ ಹಾಗೂ ಬಹಳ ಹೊತ್ತಿನ ವರೆಗೆ ಹಾರಾಟ ನಡೆಸುವ ಸಾಮರ್ಥ್ಯ ಹೊಂದಿವೆ. ದಿನದ 24 ಗಂಟೆಯೂ ಸಶಸ್ತ್ರ ಪಡೆಗಳ ಕಣ್ಗಾವಲು ಹಾಗೂ ಯುದ್ಧ ಸಾಮರ್ಥ್ಯವನ್ನು ಈ ಯುದ್ಧವಿಮಾನಗಳು ಹೆಚ್ಚಿಸಲಿವೆ’ ಎಂದು ತಿಳಿಸಿದೆ.

ಸರಕು ಸಾಗಣೆ ವಿಮಾನಗಳಾದ ಸಿ–17 ಹಾಗೂ ಸಿ–130ಜೆ, ವಾಯುಪ್ರದೇಶ ರಕ್ಷಣೆಯಲ್ಲಿ ಪ್ರಮುಖಪಾತ್ರ ವಹಿಸುವ ಎಸ್‌–400 ಕ್ಷಿಪಣಿ ವ್ಯವಸ್ಥೆಯ ನಿರ್ವಹಣೆ ಗುತ್ತಿಗೆ ಕುರಿತಂತೆಯೂ ಡಿಎಸಿ ಅನುಮೋದನೆ ನೀಡಿದೆ.

ನೌಕಾಪಡೆ: ನೌಕಾಪಡೆಗಾಗಿ ಬ್ರಹ್ಮೋಸ್‌ ಕ್ಷಿಪಣಿ ಉಡ್ಡಯನ ಹಾಗೂ ನಿಯಂತ್ರಣ ವ್ಯವಸ್ಥೆ, ಕ್ಯಾಂಪಾಕ್ಟ್‌ ಯುದ್ಧವಿಮಾನಗಳು, ಮೇಲ್ದರ್ಜೆಗೇರಿಸಲಾದ ಬರಾಕ್‌–1 ಕ್ಷಿಪಣಿ ವ್ಯವಸ್ಥೆ

ವಾಯುಪಡೆ: ಪರ್ವತ ಪ್ರದೇಶಗಳಲ್ಲಿ ಬಳಸಬಹುದಾದ ರೇಡಾರ್‌ಗಳು ಹಾಗೂ ಸಕ್ಷಮ್‌/ಸ್ಪೈಡರ್ ಆಯುದ್ಧ ವ್ಯವಸ್ಥೆ ಖರೀದಿ. ಇವುಗಳಿಂದ ವಾಯುಪ್ರದೇಶ ರಕ್ಷಣಾ ಸಾಮರ್ಥ್ಯ ಹೆಚ್ಚುವುದು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.