ADVERTISEMENT

ಶತ್ರು ದೇಶಗಳನ್ನು ಎದುರಿಸಲು ಶ್ರೀನಗರದಲ್ಲಿ MiG-29 ಫೈಟರ್ ಜೆಟ್‌ ನಿಯೋಜನೆ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 12 ಆಗಸ್ಟ್ 2023, 3:52 IST
Last Updated 12 ಆಗಸ್ಟ್ 2023, 3:52 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಶ್ರೀನಗರ: ಪಾಕಿಸ್ತಾನ ಮತ್ತು ಚೀನಾ ಕಡೆಯಿಂದ ಬರುವ ಬೆದರಿಕೆಗಳನ್ನು ಎದುರಿಸಲು ಶ್ರೀನಗರದ ವಾಯುನೆಲೆಯಲ್ಲಿ ನವೀಕರಿಸಿದ MiG-29 ಫೈಟರ್ ಜೆಟ್‌ಗಳ ಸ್ಕ್ವಾಡ್ರನ್ ಅನ್ನು ನಿಯೋಜಿಸಲಾಗಿದೆ.

ಈ ಫೈಟರ್‌ಅನ್ನು ಉತ್ತರದ ರಕ್ಷಕ ಎಂದು ಕರೆಯಲಾಗುತ್ತದೆ. ಪ್ರಮುಖವಾಗಿ ಪಾಕಿಸ್ತಾನದಿಂದ ಬರುವ ಬೆದರಿಕೆಗಳನ್ನು ಎದುರಿಸುವ ಸಾಮರ್ಥ್ಯವನ್ನು ಫೈಟರ್‌ ಹೊಂದಿದೆ.

ಶ್ರೀನಗರವು ಎತ್ತರ ಪ್ರದೇಶದಲ್ಲಿದೆ. ಹೀಗಾಗಿ ಒತ್ತಡವೂ ಹೆಚ್ಚಾಗಿರುತ್ತದೆ. ಈ ಪರಿಸ್ಥಿತಿಯಲ್ಲಿ ಮಿಗ್‌ –29 ಶತ್ರುಗಳನ್ನು ಎದುರಿಸಲು ಸಮರ್ಥವಾಗಿದೆ ಎಂದು  ಭಾರತೀಯ ವಾಯುಪಡೆಯ ಪೈಲಟ್ ಸ್ಕ್ವಾಡ್ರನ್ ಲೀಡರ್ ವಿಪುಲ್ ಶರ್ಮಾ ಹೇಳಿದ್ದಾರೆ.

ADVERTISEMENT

ಅಲ್ಲದೆ ಸಂಘರ್ಷದ ಸಮಯದಲ್ಲಿ ಶತ್ರುಗಳ ವಿಮಾನಗಳನ್ನು ನಿಷ್ಕ್ರಿಯಗೊಳಿಸುವ ಶಕ್ತಿಯನ್ನೂ ಇದು ಹೊಂದಿದೆ. ವಿಮಾನವು  ರಾತ್ರಿಯಲ್ಲಿ ಕಾರ್ಯನಿರ್ವಹಿಸಬಲ್ಲದು. ಆಕಾಶದ ಮಧ್ಯದಲ್ಲೇ ವಿಮಾನಕ್ಕೆ ಇಂಧನ ತುಂಬುವ ಸಾಮರ್ಥ್ಯವಿರುವ ಕಾರಣದಿಂದಾಗಿ ದೀರ್ಘ ವ್ಯಾಪ್ತಿಯನ್ನು ಹೊಂದಿರುತ್ತದೆ. ಈ ವಿಮಾನಗಳಲ್ಲಿ ಸೇವೆ ಸಲ್ಲಿಸಲು ಭಾರತೀಯ ವಾಯುಪಡೆಯಿಂದ ಆಯ್ಕೆಯಾದ ಪೈಲಟ್‌ಗಳು ವಿಮಾನದ ದೊಡ್ಡ ಶಕ್ತಿ ಎಂದು ಸ್ಕ್ವಾಡ್ರನ್‌ನ ನಾಯಕ ಶಿವಮ್‌ ರಾಣಾ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.