ADVERTISEMENT

ಉತ್ತರ ಕೊರಿಯಾಗೆ 10 ಲಕ್ಷ ಡಾಲರ್‌ ಮೊತ್ತದ ಔಷಧ ಕಳಿಸಲು ಭಾರತ ಸಮ್ಮತಿ

​ಪ್ರಜಾವಾಣಿ ವಾರ್ತೆ
Published 25 ಜುಲೈ 2020, 4:34 IST
Last Updated 25 ಜುಲೈ 2020, 4:34 IST
ಕೋಳಿಫಾರಂಗೆ ಭೇಟಿ ನೀಡಿದ ಉತ್ತರ ಕೊರಿಯಾದ ಸರ್ವಾಧಿಕಾರಿ ಕಿಮ್ ಜಾಂಗ್ ಉನ್. (ಎಎಫ್‌ಪಿ ಚಿತ್ರ)
ಕೋಳಿಫಾರಂಗೆ ಭೇಟಿ ನೀಡಿದ ಉತ್ತರ ಕೊರಿಯಾದ ಸರ್ವಾಧಿಕಾರಿ ಕಿಮ್ ಜಾಂಗ್ ಉನ್. (ಎಎಫ್‌ಪಿ ಚಿತ್ರ)   

ನವದೆಹಲಿ: ವಿಶ್ವ ಆರೋಗ್ಯ ಸಂಸ್ಥೆಯ ಮೂಲಕ ಸ್ವೀಕರಿಸಿದ ಮನವಿಯ ಅನ್ವಯ ಭಾರತವು ಉತ್ತರ ಕೊರಿಯಾಗೆ 10 ಲಕ್ಷ ಡಾಲರ್‌ ಮೊತ್ತದ ಔಷಧಗಳು ಮತ್ತು ಇತರ ಉಪಕರಣಗಳನ್ನು ಕಳುಹಿಸಿಕೊಡಲು ಒಪ್ಪಿಕೊಂಡಿದೆ ಎಂದು ವಿದೇಶಾಂಗ ವ್ಯವಹಾರಗಳ ಇಲಾಖೆ ತಿಳಿಸಿದೆ.

ಉತ್ತರ ಕೊರಿಯಾದ ಜನರು ಔಷಧಗಳ ಕೊರತೆಯಿಂದ ಕಂಗಾಲಾಗಿರುವ ವಿಷಯವನ್ನು ಗಂಭೀರವಾಗಿ ಪರಿಗಣಿಸಿರುವ ಭಾರತ ಸರ್ಕಾರವು ಮಾನವೀಯ ದೃಷ್ಟಿಯಿಂದ 10 ಲಕ್ಷ ಡಾಲರ್ ಮೊತ್ತದ ಕ್ಷಯದ ಔಷಧಿಗಳನ್ನು ಕಳುಹಿಸಿಕೊಡಲು ನಿರ್ಧರಿಸಿತು ಎಂದು ಇಲಾಖೆಯ ವಕ್ತಾರರು ಹೇಳಿದ್ದಾರೆ.

ವಿಶ್ವ ಆರೋಗ್ಯ ಸಂಸ್ಥೆಯು ಉತ್ತರ ಕೊರಿಯಾದಲ್ಲಿ ನಿರ್ವಹಿಸುತ್ತಿರುವ ಕ್ಷಯ ರೋಗ ನಿವಾರಣಾ ಚಟುವಟಿಕೆಗಳಿಗೆ ಪೂರಕವಾಗಿ ಈ ಔಷಧಗಳನ್ನು ಕಳುಹಿಸಿಕೊಡಲಾಗುತ್ತಿದೆ. ಹೀಗಾಗಿ ಈ ನೆರವಿಗೆ ಅಮೆರಿಕದ ನಿರ್ಬಂಧದ ಸಮಸ್ಯೆ ಇರುವುದಿಲ್ಲ.

ADVERTISEMENT

ವಿಶ್ವ ಆರೋಗ್ಯ ಸಂಸ್ಥೆಯ ಪ್ರತಿನಿಧಿಯ ಸಮಕ್ಷಮದಲ್ಲಿ ಉತ್ತರ ಕೊರಿಯಾದ ಭಾರತೀಯ ರಾಯಭಾರಿ ಮಲ್ಹಾರಿ ಗೊಟ್‌ಸುರ್ವೆ ಔಷಧಗಳನ್ನು ಉತ್ತರ ಕೊರಿಯಾದ ಅಧಿಕಾರಿಗಳಿಗೆ ಹಸ್ತಾಂತರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.