ADVERTISEMENT

ಬ್ರಹ್ಮೋಸ್‌ ಕ್ಷಿಪಣಿಗಳ ಪೂರೈಕೆಗೆ ಫಿಲಿಪ್ಪೀನ್ಸ್ ಒಪ್ಪಂದ

ಭಾರತ ಪಡೆದ ಮೊದಲ ರಫ್ತು ಆದೇಶ

ಪಿಟಿಐ
Published 28 ಜನವರಿ 2022, 11:57 IST
Last Updated 28 ಜನವರಿ 2022, 11:57 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ನವದೆಹಲಿ: ಅತ್ಯಾಧುನಿಕ ‘ಬ್ರಹ್ಮೋಸ್‌’ ಕ್ಷಿಪಣಿಗಳ ಪೂರೈಕೆಗೆ ಫಿಲಿಪ್ಪೀನ್ಸ್‌ನ ರಕ್ಷಣಾ ಸಚಿವಾಲಯ ಭಾರತದೊಂದಿಗೆ ಶುಕ್ರವಾರ ಒಪ್ಪಂದಕ್ಕೆ ಸಹಿ ಹಾಕಿದೆ.

ಈ ಕ್ಷಿಪಣಿಗಳ ರಫ್ತಿಗೆ ಸಂಬಂಧಿಸಿ ಭಾರತ ಪಡೆದ ಮೊದಲ ಆದೇಶ ಇದಾಗಿದೆ. ₹ 2,808 ಕೋಟಿ ವೆಚ್ಚದಲ್ಲಿ ಕ್ಷಿಪಣಿಗಳ ಪೂರೈಕೆಗೆ ಸಂಬಂಧಿಸಿ, ಫಿಲಿಪ್ಪೀನ್ಸ್‌ ರಕ್ಷಣಾ ಸಚಿವಾಲಯವು ಬ್ರಹ್ಮೋಸ್‌ ಏರೋಸ್ಪೇಸ್‌ ಪೈವೇಟ್‌ ಲಿಮಿಟೆಡ್‌ (ಬಿಎಪಿಎಲ್‌) ಜೊತೆ ಒಪ್ಪಂದಕ್ಕೆ ಸಹಿ ಹಾಕಿದೆ ಎಂದು ಸೇನೆಯ ಅಧಿಕಾರಿಗಳು ಹೇಳಿದ್ದಾರೆ.

ಯುದ್ಧನೌಕೆ ನಿರೋಧಕ ಬ್ರಹ್ಮೋಸ್‌ ಕ್ಷಿಪಣಿ ವ್ಯವಸ್ಥೆಯನ್ನು ಫಿಲಿಪ್ಪೀನ್ಸ್‌ ನೌಕಾಪಡೆಗೆ ಪೂರೈಕೆ ಮಾಡಲಾಗುವುದು ಎಂದಿರುವ ಅಧಿಕಾರಿಗಳು, ಪೂರೈಕೆ ಮಾಡಲಾಗುವ ಕ್ಷಿಪಣಿಗಳ ಸಂಖ್ಯೆ ಬಗ್ಗೆ ಮಾಹಿತಿ ನೀಡಿಲ್ಲ.

ADVERTISEMENT

ಬಿಎಪಿಎಲ್‌, ಭಾರತ ಹಾಗೂ ರಷ್ಯಾದ ಜಂಟಿ ಉದ್ಯಮವಾಗಿದ್ದು, ಸೂಪರ್‌ಸಾನಿಕ್‌ ಕ್ರೂಸ್‌ ಕ್ಷಿಪಣಿ ‘ಬ್ರಹ್ಮೋಸ್‌’ ತಯಾರಿಸುತ್ತದೆ. ಈ ಕ್ಷಿಪಣಿಗಳನ್ನು ಜಲಾಂತರ್ಗಾಮಿಗಳು, ಯುದ್ಧನೌಕೆಗಳು, ಯುದ್ಧವಿಮಾನಗಳು ಹಾಗೂ ಭೂಪ್ರದೇಶದಲ್ಲಿ ಕಾರ್ಯಾಚರಣೆ ನಡೆಸುವ ಸೇನೆಯ ನಿರ್ದಿಷ್ಟ ವಾಹನಗಳ ಮೂಲಕ ಉಡಾಯಿಸಬಹುದಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.