ADVERTISEMENT

ಸಾಮಾಜಿಕ ಮಾಧ್ಯಮಗಳು ಎಐ ರಚಿತ ಕಂಟೆಂಟ್‌ಗಳಿಗೆ ಲೇಬಲ್ ಮಾಡುವುದು ಕಡ್ಡಾಯ: ಕೇಂದ್ರ

ಪಿಟಿಐ
Published 11 ಫೆಬ್ರುವರಿ 2026, 8:20 IST
Last Updated 11 ಫೆಬ್ರುವರಿ 2026, 8:20 IST
   

Govt mandates social media platforms to prominently label AI-generated content, 3-hr takedown timeline

ನವದೆಹಲಿ: ಸಾಮಾಜಿಕ ಮಾಧ್ಯಮ ವೇದಿಕೆಗಳು ಎಐ ರಚಿತ ಕಂಟೆಂಟ್‌ಗಳಿಗೆ ಲೇಬಲ್ ಮಾಡಲು ಕೇಂದ್ರ ಸರ್ಕಾರ ಆದೇಶಿಸಿದೆ. ಅಂತಹ ಸಿಂಥೆಟಿಕ್ ಕಂಟೆಂಟ್‌ಗಳನ್ನು ಐಡೆಂಟಿಫಯರ್‌ಗಳೊಂದಿಗೆ ಎಂಬೆಡ್ ಮಾಡಬೇಕು ಎಂದು ಹೇಳಿದೆ.

ಕಾನೂನುಬಾಹಿರ, ಲೈಂಗಿಕವಾಗಿ ಶೋಷಿಸುವ ಅಥವಾ ವಂಚನೆ ಸಂಬಂಧಿತ ಎಐ ಕಂಟೆಂಟ್‌ಗಳನ್ನು ತಡೆಯಲು ಸಾಮಾಜಿಕ ಮಾಧ್ಯಮ ವೇದಿಕೆಗಳು ಸ್ವಯಂಚಾಲಿತ ಟೂಲ್ ಅಳವಡಿಸಬೇಕು ಎಂದು ಸರ್ಕಾರಿ ಆದೇಶದಲ್ಲಿ ತಿಳಿಸಲಾಗಿದೆ.

ADVERTISEMENT

ಸಾಮಾಜಿಕ ಮಾಧ್ಯಮ ವೇದಿಕೆಗಳು ಒಮ್ಮೆ ಅನ್ವಯಿಸಿದ ಎಐ ಲೇಬಲ್‌ಗಳು ಅಥವಾ ಮೆಟಾಡೇಟಾವನ್ನು ತೆಗೆದುಹಾಕಲು ಅಥವಾ ನಿಗ್ರಹಿಸಲು ಅನುಮತಿಸುವುದಿಲ್ಲ ಎಂದು ಆದೇಶದಲ್ಲಿ ಸೇರಿಸಲಾಗಿದೆ.

ಡೀಪ್‌ಫೇಕ್ ಸೇರಿದಂತೆ ಎಐ ರಚಿತ ಮತ್ತು ಸಿಂಥೆಟಿಕ್ ಕಂಟೆಂಟ್‌ಗಳನ್ನು ನಿರ್ವಹಿಸಲು ಕಠಿಣ ಮಾರ್ಗಸೂಚಿಗಳನ್ನು ಪರಿಚಯಿಸಲಾಗುತ್ತಿದೆ. ಯಾವುದೇ ಸಕ್ಷಮ ಪ್ರಾಧಿಕಾರ ಅಥವಾ ನ್ಯಾಯಾಲಯಗಳು ಅಂತಹ ಕಂಟೆಂಟ್‌ಗಳ ಬಗ್ಗೆ ಗಮನ ಸೆಳೆದಾಗ ಸಾಮಾಜಿಕ ಮಾಧ್ಯಮ ವೇದಿಕೆಗಳು ಅವುಗಳನ್ನು ತೆಗೆದುಹಾಕಬೇಕು ಎಂದು ಆದೆಶ ತಿಳಿಸಿದೆ.

ಹೊಸ ನಿಯಮಾವಳಿಯು ಇದೇ 20ರಿಂದ ಜಾರಿಗೆ ಬರಲಿದೆ.

ವಂಚಿಸುವ, ಲೈಂಗಿಕವಾಗಿ ಶೋಷಿಸುವ, ಒಪ್ಪಿಗೆ ಇಲ್ಲದ ಅಥವಾ ಸುಳ್ಳು ದಾಖಲೆಗಳು, ಮಕ್ಕಳ ಮೇಲಿನ ದೌರ್ಜನ್ಯದ ಕಂಟೆಂಟ್ ಇತ್ಯಾದಿಗಳಿಗೆ ಸಂಬಂಧಿಸಿದ ಎಐ ಕಂಟೆಂಟ್‌ಗಳನ್ನು ಪತ್ತೆಹಚ್ಚಲು ಮತ್ತು ತಡೆಯಲು ಸ್ವಯಂಚಾಲಿತ ಟೂಲ್ ಅನ್ನು ಅಳವಡಿಸಿಕೊಳ್ಳಲು ಸಾಮಾಜಿಕ ಮಾಧ್ಯಮ ವೇದಿಕೆಗಳನ್ನು ಒತ್ತಾಯಿಸುತ್ತದೆ ಎಂದು ವರದಿ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.