ADVERTISEMENT

ಕೆನಡಾ ಶೃಂಗಸಭೆಗೆ ಭಾರತಕ್ಕೆ ಆಹ್ವಾನವಿಲ್ಲ: ಕಾಂಗ್ರೆಸ್

ಪಿಟಿಐ
Published 3 ಜೂನ್ 2025, 16:08 IST
Last Updated 3 ಜೂನ್ 2025, 16:08 IST
   

ನವದೆಹಲಿ: ‘ಕೆನಡಾದಲ್ಲಿ ನಡೆಯಲಿರುವ ಜಿ7 ಶೃಂಗಸಭೆಗೆ ಭಾರತಕ್ಕೆ ಆಹ್ವಾನ ದೊರೆತಿಲ್ಲ. ಇದು, ಭಾರತ–ಪಾಕಿಸ್ತಾನ ನಡುವೆ ಅಮೆರಿಕದ ‘ಮಧ್ಯಸ್ಥಿಕೆ’ಗೆ ಅವಕಾಶ ಕಲ್ಪಿಸಿದ ನಂತರ ಮತ್ತೊಂದು ಪ್ರಮಾದ’ ಎಂದು ಕಾಂಗ್ರೆಸ್ ಮಂಗಳವಾರ ಹೇಳಿದೆ.

ಕೆನಡಾದಲ್ಲಿ ಜೂನ್ 15 ರಿಂದ 17ರವರೆಗೂ ಶೃಂಗಸಭೆ ನಡೆಯಲಿದೆ. ಕಳೆದ ಆರು ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಈ ಶೃಂಗಸಭೆಯಲ್ಲಿ ಭಾಗವಹಿಸುವ ಸಾಧ್ಯತೆಗಳು ಕಡಿಮೆ ಎಂದು ಮೂಲಗಳು ತಿಳಿಸಿವೆ.

ಈ ಕುರಿತು ಪ್ರತಿಕ್ರಿಯಿಸಿರುವ ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಅವರು ’ಅಮೆರಿಕ, ಫ್ರಾನ್ಸ್‌, ಉಕ್ರೇನ್‌ ಅಧ್ಯಕ್ಷರು, ಬ್ರಿಟನ್, ಜಪಾನ್‌, ಇಟಲಿ, ಕೆನಡಾ ಪ್ರಧಾನಿಗಳನ್ನು ಶೃಂಗಸಭೆಗೆ ಆಹ್ವಾನಿಸಲಾಗಿದೆ’ ಎಂದು ತಿಳಿಸಿದರು.

ADVERTISEMENT

ಭಾರತದ ಪ್ರಧಾನಿಯವರನ್ನು ಆಹ್ವಾನಿಸದೇ ಇರುವ ಸಂಪ್ರದಾಯ 2014ರ ನಂತರ ಆರಂಭವಾಗಿದೆ ಎಂದು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.