ADVERTISEMENT

ಓಮೈಕ್ರಾನ್: ದೇಶದಲ್ಲಿ ಪ್ರಕರಣಗಳ ಸಂಖ್ಯೆ 151ಕ್ಕೆ ಏರಿಕೆ

ಪಿಟಿಐ
Published 19 ಡಿಸೆಂಬರ್ 2021, 19:49 IST
Last Updated 19 ಡಿಸೆಂಬರ್ 2021, 19:49 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ಭಾರತದಲ್ಲಿ ಕೊರೊನಾ ವೈರಾಣುವಿನ ಹೊಸ ರೂಪಾಂತರ ತಳಿ ಓಮೈಕ್ರಾನ್‌ ಪ್ರಕರಣಗಳ ಸಂಖ್ಯೆ ಭಾನುವಾರ 151ಕ್ಕೆ ಏರಿದೆ.

ಬ್ರಿಟನ್‌ನಿಂದ ಇತ್ತೀಚೆಗೆ ಬಂದ ಅನಿವಾಸಿ ಭಾರತೀಯ ಮತ್ತು ಹದಿಹರೆಯದ ಒಬ್ಬ ಬಾಲಕನಲ್ಲಿ ಸೋಂಕು ದೃಢಪಟ್ಟಿದೆ.

ಈಗ, 11 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶದಲ್ಲಿ ಓಮೈಕ್ರಾನ್‌ ಪ್ರಕರಣಗಳು ಇವೆ.

ADVERTISEMENT

ಮಹಾರಾಷ್ಟ್ರ (54), ದೆಹಲಿ (22), ರಾಜಸ್ಥಾನ (17), ಕರ್ನಾಟಕ (14), ತೆಲಂಗಾಣ (20), ಗುಜರಾತ್‌ (9), ಕೇರಳ (11) ಮತ್ತು ಆಂಧ್ರ ಪ್ರದೇಶ, ಚಂಡೀಗಡ, ತಮಿಳುನಾಡು, ಪಶ್ಚಿಮ ಬಂಗಾಳದಲ್ಲಿ ತಲಾ ಒಂದೊಂದು ಪ್ರಕರಣಗಳು ದೃಢಪಟ್ಟಿವೆ. ಓಮೈಕ್ರಾನ್‌ನ ಮೊದಲ ಪ್ರಕರಣವು ಕರ್ನಾಟಕದಲ್ಲಿ ಇದೇ 2ರಂದು ದೃಢಪಟ್ಟಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.