ADVERTISEMENT

ಭಾರತ–ಪಾಕ್‌ ಪರಮಾಣು ಸ್ಥಾವರ ಮತ್ತು ಮೂಲಸೌಕರ್ಯಗಳ ಮಾಹಿತಿ ಪರಸ್ಪರ ವಿನಿಮಯ

ಪಿಟಿಐ
Published 1 ಜನವರಿ 2026, 13:29 IST
Last Updated 1 ಜನವರಿ 2026, 13:29 IST
<div class="paragraphs"><p>ಭಾರತ–ಪಾಕಿಸ್ತಾನ</p></div>

ಭಾರತ–ಪಾಕಿಸ್ತಾನ

   

– ಗೆಟ್ಟಿ ಚಿತ್ರ

ನವದೆಹಲಿ: ದ್ವಿಪಕ್ಷೀಯ ಒಪ್ಪಂದದ ಪ್ರಕಾರ ಭಾರತ ಮತ್ತು ಪಾಕಿಸ್ತಾನ ತಮ್ಮಲ್ಲಿನ ಪರಮಾಣು ಸ್ಥಾವರಗಳು ಹಾಗೂ ಮೂಲಸೌಕರ್ಯಗಳ ಪಟ್ಟಿಯನ್ನು ಗುರುವಾರ ಪರಸ್ಪರ ವಿನಿಮಯ ಮಾಡಿಕೊಂಡವು.

ADVERTISEMENT

ಉಭಯ ದೇಶಗಳು ಪರಸ್ಪರರ ಪರಮಾಣ ಮೂಲಸೌಕರ್ಯಗಳನ್ನು ಗುರಿಯಾಗಿಸಿ ದಾಳಿ ನಡೆಸುವುದನ್ನು ಈ ಒಪ್ಪಂದವು ತಡೆಯುತ್ತದೆ. ಒಪ್ಪಂದದ ನಿಬಂಧನೆಗಳ ಪ್ರಕಾರ ಎರಡೂ ದೇಶಗಳ ಪಟ್ಟಿಯ ವಿನಿಮಯ ನಡೆದಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ಮಾಹಿತಿ ನೀಡಿದೆ.

ಕಳೆದ ವರ್ಷ ಮೇನಲ್ಲಿ ನಡೆದ ನಾಲ್ಕು ದಿನಗಳ ಸೇನಾ ಸಂಘರ್ಷದಿಂದ ಎರಡೂ ದೇಶಗಳ ನಡುವಿನ ಸಂಬಂಧ ತೀವ್ರ ಹದಗೆಟ್ಟಿದ್ದರೂ ಪಟ್ಟಿಯ ವಿನಿಮಯ ನಡೆದಿದೆ.

ರಾಜತಾಂತ್ರಿಕ ಮಾರ್ಗಗಳ ಮೂಲಕ ನವದೆಹಲಿ ಮತ್ತು ಇಸ್ಲಾಮಾಬಾದ್‌ನಲ್ಲಿ ಏಕಕಾಲದಲ್ಲಿ ಪಟ್ಟಿಗಳ ವಿನಿಮಯ ನಡೆದಿದೆ ಎಂದು ಸಚಿವಾಲಯ ಹೇಳಿದೆ. ಉಭಯ ದೇಶಗಳು 1988ರ ಡಿಸೆಂಬರ್‌ 31ರಂದು ಸಹಿ ಹಾಕಿದ್ದ ಈ ಒಪ್ಪಂದವು 1991ರ ಜನವರಿ 27ರಂದು ಜಾರಿಗೆ ಬಂದಿತ್ತು.