ಲಂಡನ್: ಸ್ಪೇನ್ ಜೊತೆಗಿನ ಒಪ್ಪಂದಂತೆ ಕೊನೆಯ 16 ಮಿಲಿಟರಿ ಸರಕು ಸಾಗಣೆ ವಿಮಾನಗಳನ್ನು (ಸಿ–295) ಭಾರತವು ಶನಿವಾರ ಸ್ವೀಕರಿಸಿದೆ ಎಂದು ಸ್ಪೇನ್‌ನಲ್ಲಿರುವ ಭಾರತೀಯ ರಾಜಭಾರ ಕಚೇರಿ ತಿಳಿಸಿದೆ.
ಮಿಲಿಟರಿ ಸರಕು ಸಾಗಾಣೆಯ 56 ವಿಮಾನಗಳ ಖರೀದಿ ಬಗ್ಗೆ ಭಾರತದ ರಕ್ಷಣಾ ಸಚಿವಾಲಯವು ಸ್ಪೇನ್ ಮೂಲದ ಏರ್‌ಬಸ್ ಡಿಫೆನ್ಸ್ ಆ್ಯಂಡ್ ಸ್ಪೇಸ್ ಕಂಪನಿಯ ಜೊತೆ 2021ರಲ್ಲಿ ಒಪ್ಪಂದ ಮಾಡಿಕೊಂಡಿತ್ತು.
ಈ ಒಪ್ಪಂದದ ಪ್ರಕಾರ 40 ಯುದ್ಧವಿಮಾನಗಳು ಭಾರತದಲ್ಲೇ ನಿರ್ಮಾಣಗೊಳ್ಳಲಿದ್ದು, 16 ವಿಮಾನಗಳನ್ನು ಸ್ಪೇನ್‌ನಿಂದ ತರಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.