ADVERTISEMENT

Covid-19 India Update: 74 ದಿನಗಳಲ್ಲೇ ಅತಿ ಕಡಿಮೆ ಸೋಂಕು ಪ್ರಕರಣಗಳು

ದೇಶದಲ್ಲಿ ಹೊಸದಾಗಿ 70,421 ಕೋವಿಡ್‌–19 ಪ್ರಕರಣಗಳು ದೃಢ

​ಪ್ರಜಾವಾಣಿ ವಾರ್ತೆ
Published 14 ಜೂನ್ 2021, 6:23 IST
Last Updated 14 ಜೂನ್ 2021, 6:23 IST
   

ನವದೆಹಲಿ: ದೇಶದಾದ್ಯಂತ ಸೋಮವಾರ ಬೆಳಿಗ್ಗೆ 8 ಗಂಟೆಗೆ ಕೊನೆಗೊಂಡ 24 ಗಂಟೆಯ ಅವಧಿಯಲ್ಲಿ ಹೊಸದಾಗಿ 70,421 ಕೋವಿಡ್‌–19 ಪ್ರಕರಣಗಳು ದೃಢಪಟ್ಟಿವೆ.

ಇದು ಕಳೆದ 74 ದಿನಗಳಲ್ಲೇ ಪತ್ತೆಯಾದ ಅತಿ ಕಡಿಮೆ ಪ್ರಕರಣಗಳಾಗಿವೆ. ದೇಶದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 2.95 ಕೋಟಿಗೆ ಏರಿಕೆಯಾಗಿದ್ದು, ಎರಡು ತಿಂಗಳ ಬಳಿಕ ಸಕ್ರಿಯ ಪ್ರಕರಣಗಳ ಸಂಖ್ಯೆಯಲ್ಲೂ ಇಳಿಕೆಯಾಗಿದೆ. ಈಗ 9.73 ಲಕ್ಷ ಸಕ್ರಿಯ ಪ್ರಕರಣಗಳಿವೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ.

ದೇಶದಲ್ಲಿ ಕೋವಿಡ್‌–19ನಿಂದ ಹೊಸದಾಗಿ 3,921 ಮಂದಿ ಸಾವಿಗೀಡಾಗಿದ್ದಾರೆ. ಇದರಿಂದ, ಇದುವರೆಗೆ ಸಾವಿಗೀಡಾದವರ ಸಂಖ್ಯೆ 3.74 ಲಕ್ಷಕ್ಕೆ ಏರಿಕೆಯಾಗಿದೆ ಎಂದು ತಿಳಿಸಿದೆ.

ADVERTISEMENT

ಜತೆಗೆ ಪಾಸಿಟಿವಿಟಿ ದರವು ಶೇಕಡ 4.72ರಷ್ಟು ದಾಖಲಾಗಿದೆ. ಸತತ 21 ದಿನಗಳಿಂದ ಶೇಕಡ 10ಕ್ಕಿಂತ ಕಡಿಮೆ ’ಪಾಸಿಟಿವಿಟಿ’ ದರ ದಾಖಲಾಗಿದೆ. ಗುಣಮುಖರಾಗುವವರ ಸಂಖ್ಯೆಯಲ್ಲೂ ಏರಿಕೆಯಾಗಿದ್ದು, ಶೇಕಡ 95.43ರಷ್ಟು ದಾಖಲಾಗಿದೆ. ಇದುವರೆಗೆ, 2.81 ಕೋಟಿ ಮಂದಿ ಗುಣಮುಖರಾಗಿದ್ದಾರೆ ಎಂದು ಸಚಿವಾಲಯ ತಿಳಿಸಿದೆ.

ದೇಶದಲ್ಲಿ ಇದುವರೆಗೆ 25.48 ಕೋಟಿ ಮಂದಿಗೆ ಕೋವಿಡ್‌–19 ಲಸಿಕೆಯ ಡೋಸ್‌ಗಳನ್ನು ಹಾಕಲಾಗಿದೆ ಎಂದು ಮಾಹಿತಿ ನೀಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.