ADVERTISEMENT

ಗಿಲ್ಗಿಟ್–ಬಾಲ್ಟಿಸ್ತಾನ್‌ಗೆ ಪ್ರಾಂತೀಯ ಸ್ಥಾನಮಾನ: ಭಾರತ ತಿರಸ್ಕಾರ

ಪಿಟಿಐ
Published 1 ನವೆಂಬರ್ 2020, 17:01 IST
Last Updated 1 ನವೆಂಬರ್ 2020, 17:01 IST
ಸಂಸತ್‌
ಸಂಸತ್‌   

ನವದೆಹಲಿ: ಗಿಲ್ಗಿಟ್–ಬಾಲ್ಟಿಸ್ತಾನ್ ಎಂದು ಕರೆಯಲಾಗುವ ಪ್ರದೇಶಕ್ಕೆ ಪ್ರಾಂತೀಯ ಸ್ಥಾನಮಾನ ನೀಡುವ ಪಾಕಿಸ್ತಾನದ ಪ್ರಯತ್ನಕ್ಕೆ ಭಾರತ ದೃಢವಾಗಿ ತಿರಸ್ಕಾರ ವ್ಯಕ್ತಪಡಿಸಿದೆ.

‘ಈ ಪ್ರದೇಶವನ್ನು ಅಕ್ರಮವಾಗಿ ಅತಿಕ್ರಮಣ ಮಾಡಿಕೊಂಡಿರುವ ಇಸ್ಲಾಮಾಬಾದ್, ಅದನ್ನು ಮರೆಮಾಚುವ ಉದ್ದೇಶಕ್ಕಾಗಿಯೇ ಈ ರೀತಿಯ ಪ್ರಯತ್ನವನ್ನು ಮಾಡುತ್ತಿದೆ. ಇದನ್ನು ಭಾರತ ದೃಢವಾಗಿ ತಿರಸ್ಕರಿಸುತ್ತದೆ. ಅತಿಕ್ರಮಣದ ಪ್ರದೇಶವನ್ನು ಪಾಕಿಸ್ತಾನ ಕೂಡಲೇ ತೆರವುಗೊಳಿಸಬೇಕು’ ಎಂದು ಭಾರತದ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ಅನುರಾಗ್ ಶ್ರೀನಿವಾಸ್ ಭಾನುವಾರ ಹೇಳಿದ್ದಾರೆ.

‘ಗಿಲ್ಗಿಟ್–ಬಾಲ್ಟಿಸ್ತಾನ್ ಎಂದು ಕರೆಯಲಾಗುವ ಪ್ರದೇಶವನ್ನು ಒಳಗೊಂಡಂತೆ ಜಮ್ಮು ಮತ್ತು ಕಾಶ್ಮೀರದ ಕೇಂದ್ರಾಡಳಿತ ಪ್ರದೇಶಗಳು ಕಾನೂನುಬದ್ಧವಾಗಿ ಸಂಪೂರ್ಣವಾಗಿ ಭಾರತದ ಒಕ್ಕೂಟ ವ್ಯವಸ್ಥೆಯ ಅವಿಭಾಜ್ಯ ಅಂಗವಾಗಿವೆ’ ಎಂದೂ ಅವರು ತಿಳಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.