ADVERTISEMENT

India Covid Update: 6,660 ಹೊಸ ಪ್ರಕರಣಗಳು ದೃಢ, 24 ಸಾವು

ಪಿಟಿಐ
Published 25 ಏಪ್ರಿಲ್ 2023, 5:09 IST
Last Updated 25 ಏಪ್ರಿಲ್ 2023, 5:09 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ದೇಶದಲ್ಲಿ ಹೊಸದಾಗಿ 6,660 ಕೋವಿಡ್‌ ಪ್ರಕರಣಗಳು ವರದಿಯಾಗಿದೆ. ಸಕ್ರಿಯ ಪ್ರಕರಣಗಳ ಸಂಖ್ಯೆ 63,380ಕ್ಕೆ ತಲುಪಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯದ ಪ್ರಕಟಣೆ ತಿಳಿಸಿದೆ.

ಕೇರಳದಲ್ಲಿ 9 ಮಂದಿ ಸೇರಿದಂತೆ ದೇಶದಾದ್ಯಂತ ಕೋವಿಡ್‌ನಿಂದ ಒಂದೇ ದಿನ 24 ಜನ ಮೃತಪಟ್ಟಿದ್ದು, ಒಟ್ಟು ಸಾವಿನ ಸಂಖ್ಯೆ 5,31,369ಕ್ಕೆ ಏರಿಕೆಯಾಗಿದೆ.

ಈವರೆಗೆ ಒಟ್ಟು 4,48,98,893 ಮಂದಿ ಕೋವಿಡ್‌ಗೆ ಒಳಗಾಗಿದ್ದು, 4,43,11,078 ಮಂದಿ ಗುಣಮುಖರಾಗಿದ್ದಾರೆ.

ADVERTISEMENT

‘ಪ್ರಸ್ತುತ, ದೈನಂದಿನ ಕೋವಿಡ್‌ ದೃಢ ಪ್ರಮಾಣ ಶೇ 3.52ರಷ್ಟಿದೆ ಹಾಗೂ ವಾರದ ದೃಢ ಪ್ರಮಾಣ ಶೇ 5.42ರಷ್ಟಿದೆ’ ಎಂದೂ ಪ್ರಕಟಣೆಯಲ್ಲಿ ಮಾಹಿತಿ ನೀಡಲಾಗಿದೆ.

ಸಕ್ರಿಯ ಪ್ರಕರಣಗಳ ಸಂಖ್ಯೆ ಶೇ 0.14ರಷ್ಟಿದ್ದು, ಚೇತರಿಕೆ ಪ್ರಮಾಣ 98.67ರಷ್ಟು ಇದೆ. ಸಾವಿನ ಪ್ರಮಾಣ ಶೇ 1.18ರಷ್ಟಿದೆ ಎಂದು ಸಚಿವಾಲಯ ಮಾಹಿತಿ ನೀಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.