ADVERTISEMENT

ಉಗ್ರರ ನೆಲೆ ಮೇಲೆ ದಾಳಿ ನಡೆಸಲು ಭಾರತಕ್ಕೆ ಹಕ್ಕಿದೆ: ಮನೋಜ್ ಮುಕುಂದ್

ಪಿಟಿಐ
Published 31 ಡಿಸೆಂಬರ್ 2019, 19:45 IST
Last Updated 31 ಡಿಸೆಂಬರ್ 2019, 19:45 IST
ಭೂ ಸೇನೆಯ ಮುಖ್ಯಸ್ಥರಾಗಿ ಅಧಿಕಾರ ಸ್ವೀಕರಿಸಿದ ಮನೋಜ್‌ ಮುಕುಂದ್‌ ನರವಣೆ (ಕುಳಿತಿರುವವರು). ನಿವೃತ್ತ ಮುಖ್ಯಸ್ಥ ಜ.ಬಿಪಿನ್‌ ರಾವತ್‌ ಇದ್ದಾರೆ.
ಭೂ ಸೇನೆಯ ಮುಖ್ಯಸ್ಥರಾಗಿ ಅಧಿಕಾರ ಸ್ವೀಕರಿಸಿದ ಮನೋಜ್‌ ಮುಕುಂದ್‌ ನರವಣೆ (ಕುಳಿತಿರುವವರು). ನಿವೃತ್ತ ಮುಖ್ಯಸ್ಥ ಜ.ಬಿಪಿನ್‌ ರಾವತ್‌ ಇದ್ದಾರೆ.   

ನವದೆಹಲಿ: ‘ಭಯೋತ್ಪಾದಕರ ನೆಲೆಗಳ ಮೇಲೆ ದಾಳಿ ನಡೆಸಲು ಭಾರತಕ್ಕೆ ಹಕ್ಕಿದೆ’ ಭೂ ಸೇನೆಯ 28ನೇ ಮುಖ್ಯಸ್ಥರಾಗಿ ಅಧಿಕಾರ ಸ್ವೀಕರಿಸಿದ ದಿನವೇ ಜನರಲ್ ಮನೋಜ್ ಮುಕುಂದ್ ನರವಣೆ ಅವರು ಪಾಕಿಸ್ತಾನಕ್ಕೆ ಪರೋಕ್ಷ ಎಚ್ಚರಿಕೆ ನೀಡಿದ್ದಾರೆ.

ಚೀನಾ ಜತೆಗಿನ ಗಡಿಯಲ್ಲಿ ಸೇನೆಯ ಹೋರಾಟ ಸಾಮರ್ಥ್ಯ ಹೆಚ್ಚಳ ಮಾಡಲಾಗುವುದು. ಇದರಿಂದಾಗಿ ಯಾವುದೇ ರೀತಿಯ ಭದ್ರತಾ ಸವಾಲು ಎದುರಿಸಲು ಭಾರತ ಸಿದ್ಧವಾಗಿರುತ್ತದೆ ಎಂದು ಅವರು ಹೇಳಿದ್ದಾರೆ.

ನರವಣೆ ಅವರಿಗೆ ಮಂಗಳವಾರ ಜ. ಬಿಪಿನ್‌ ರಾವತ್‌ ಅವರು ಅಧಿಕಾರ ಹಸ್ತಾಂತರಿಸಿದರು.

ADVERTISEMENT

ನರವಣೆ ಅವರು 37 ವರ್ಷಗಳ ಸೇವೆಯಲ್ಲಿ ಜಮ್ಮು ಮತ್ತು ಕಾಶ್ಮೀರ ಮತ್ತು ಈಶಾನ್ಯ ಭಾರತದಲ್ಲಿ ಶಾಂತಿ ಸ್ಥಾಪನೆ ಮತ್ತು ಸಿಬ್ಬಂದಿ ನೇಮಕಾತಿಗಳಲ್ಲಿ ಮಹತ್ವದ ಸೇವೆ ಸಲ್ಲಿಸಿದ್ದಾರೆ.

ಜಮ್ಮು ಮತ್ತು ಕಾಶ್ಮೀರದಲ್ಲಿ ರಾಷ್ಟ್ರೀಯ ರೈಫಲ್‌ ಬೆಟಾಲಿಯನ್‌ನ ಕಮಾಂಡರ್‌ ಆಗಿ, ಶ್ರೀಲಂಕಾದ ಭಾರತೀಯ ಶಾಂತಿಪಾಲನಾ ಪಡೆಯಲ್ಲಿ ಕೆಲಸ ಮಾಡಿದ್ದಾರೆ. ಅವರಿಗೆ ಪ್ರತಿಷ್ಠಿತ ‘ಸೇನಾ ಪದಕ’, ‘ವಿಶಿಷ್ಟ ಸೇವಾ ಪದಕ’, ‘ಅತಿ ವಿಶಿಷ್ಟ ಸೇವಾ ಪದಕ’ಗಳು ದೊರೆತಿವೆ.

ಸೇನೆಯ ನೂತನ ಸಾರಥಿಗೆ ಶುಭ ಕೋರಿದ ಬಿಪಿನ್‌ ರಾವತ್‌, ‘ದೇಶದ ಭದ್ರತಾ ಸವಾಲುಗಳನ್ನು ಎದುರಿಸಲು ಸೇನೆ ಸಿದ್ಧವಾಗಿದೆಯೇ?’ ಎಂದು ಪ್ರಶ್ನಿಸಿದರು. ಪ್ರತಿಕ್ರಿಯಿಸಿದ ಮನೋಜ್ ಮುಕುಂದ್ ನರವಣೆ, ’ಹೌದು, ನಾವು ಸಕಲ ರೀತಿಯಲ್ಲೂ ಸಜ್ಜಾಗಿದ್ದೇವೆ‘ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.