ADVERTISEMENT

ಬೃಹತ್‌ ವ್ಯಾಪಾರ ಕೊರತೆ ಬಗ್ಗೆ ಭಾರತದ ಕಳವಳ ಪರಿಹರಿಸಲು ಸಿದ್ಧ: ರಷ್ಯಾ ವಕ್ತಾರ 

ಪಿಟಿಐ
Published 2 ಡಿಸೆಂಬರ್ 2025, 16:14 IST
Last Updated 2 ಡಿಸೆಂಬರ್ 2025, 16:14 IST
ಡಿಮಿಟ್ರಿ ಪೆಸ್ಕೋವ್
ಡಿಮಿಟ್ರಿ ಪೆಸ್ಕೋವ್   

ನವದೆಹಲಿ: ಬೃಹತ್ ವ್ಯಾಪಾರ ಕೊರತೆಯ ಕುರಿತು ಭಾರತದ ಕಳವಳದ ಬಗ್ಗೆ ರಷ್ಯಾಗೆ ಸಂಪೂರ್ಣವಾಗಿ ತಿಳಿದಿದೆ. ಈ ಸಮಸ್ಯೆಯನ್ನು ಪರಿಹರಿಸಲು ನಾವು ಭಾರತದೊಂದಿಗೆ ಕೆಲಸ ಮಾಡುತ್ತಿದ್ದೇವೆ ಎಂದು ರಷ್ಯಾ ಅಧ್ಯಕ್ಷರ ಕಚೇರಿಯ ವಕ್ತಾರ ಡಿಮಿಟ್ರಿ ಪೆಸ್ಕೋವ್ ಮಂಗಳವಾರ ಹೇಳಿದ್ದಾರೆ. 

ಭಾರತದ ಪತ್ರಕರ್ತರೊಂದಿಗೆ ವಿಡಿಯೊ ಸ್ಟ್ರೀಮ್‌ ಆಧಾರಿತ ಸುದ್ದಿಗೋಷ್ಠಿಯಲ್ಲಿ ಡಿಮಿಟ್ರಿ ಪೆಸ್ಕೋವ್ ಅವರು ಮಾತನಾಡಿದರು. ಉಕ್ರೇನ್‌ನಲ್ಲಿ ಅಮೆರಿಕದ ಶಾಂತಿ ಯೋಜನೆ, ರಷ್ಯಾದ ಕಚ್ಚಾ ತೈಲದ ಮೇಲೆ ಅಮೆರಿಕದ ನಿರ್ಬಂಧಗಳು, ಭಾರತಕ್ಕೆ ರಷ್ಯಾದ ರಕ್ಷಣಾ ಮತ್ತು ತಂತ್ರಜ್ಞಾನ ಪೂರೈಕೆ ಸೇರಿದಂತೆ ಹಲವು ವಿಷಯಗಳ ಬಗ್ಗೆ ಪ್ರಸ್ತಾಪಿಸಿದರು. 

ಜಾಗತಿಕ ವ್ಯಾಪಾರದಲ್ಲಿ ಪಾವತಿ ವ್ಯವಸ್ಥೆಯನ್ನು (ಈಗಿನ ಅಮೆರಿಕದ ಡಾಲರ್‌ ಆಧಾರಿತ ಪಾವತಿ) ‘ರಾಜಕೀಯ ಸಾಧನ’ವಾಗಿ ಬಳಸದ ಹೊಸ ವ್ಯವಸ್ಥೆಗೆ ಕರೆ ನೀಡಿದರು. 

ADVERTISEMENT

ಡಿ 4 ಮತ್ತು 5ರಂದು ರಷ್ಯಾ ಅಧ್ಯಕ್ಷ ವ್ಲಾದಿಮಿರ್‌ ಪುಟಿನ್‌ ಅವರು ಭಾರತಕ್ಕೆ ಭೇಟಿ ನೀಡಲಿರುವ ಕಾರಣ ಡಿಮಿಟ್ರಿ ಅವರು ಸುದ್ದಿಗೋಷ್ಠಿ ನಡೆಸಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.