ADVERTISEMENT

ಸೆಪ್ಟೆಂಬರ್‌–ಅಕ್ಟೋಬರ್‌ ಅವಧಿಯಲ್ಲಿ 125 ಸಲ ಭಾರಿ ಮಳೆ

ಪಿಟಿಐ
Published 2 ನವೆಂಬರ್ 2021, 11:46 IST
Last Updated 2 ನವೆಂಬರ್ 2021, 11:46 IST
   

ನವದೆಹಲಿ: ನೈಋತ್ಯ ಮಾನ್ಸೂನ್ ಮಾರುತಗಳು ಅಂತ್ಯಗೊಳ್ಳುವುದರಲ್ಲಿ ಆದ ವಿಳಂಬ ಮತ್ತು ಸಾಮಾನ್ಯಕ್ಕಿಂತಲೂ ಹೆಚ್ಚಿನ ಒತ್ತಡದ ಪರಿಸ್ಥಿತಿ ಸೃಷ್ಟಿಯಾದ ಹಿನ್ನೆಲೆಯಲ್ಲಿ ಈ ವರ್ಷದ ಸೆಪ್ಟೆಂಬರ್‌ ಮತ್ತು ಅಕ್ಟೋಬರ್‌ನಲ್ಲಿ ವಿಪರೀತ ಮಳೆಯಾಗಿದೆ. ಈ ಎರಡು ತಿಂಗಳ ಅವಧಿಯಲ್ಲಿ 125 ಸಲ ಭಾರಿ ಮಳೆ ಸುರಿದಿವೆ. ಇದು ಇತ್ತೀಚಿನ ಐದು ವರ್ಷಗಳಲ್ಲೇ ಅಧಿಕ ಎಂದು ಭಾರತೀಯ ಹವಾಮಾನ ಇಲಾಖೆ–ಐಎಂಡಿ ಮಂಗಳವಾರ ತಿಳಿಸಿದೆ.

ಸೆಪ್ಟೆಂಬರ್‌ನಲ್ಲಿ 89 ಸಲ ಭಾರಿ ಮಳೆಯಾಗಿದೆ. ಕಳೆದ ವರ್ಷ ಇದೇ ತಿಂಗಳಲ್ಲಿ 61ಸಲ ಭಾರಿ ಮಳೆಯಾಗಿತ್ತು. 2019 ರಲ್ಲಿ 59, 2018 ರಲ್ಲಿ 44 ಮತ್ತು 2017 ರಲ್ಲಿ 29 ಸಲ ವಿಪರೀತ ಮಳೆಯಾಗಿತ್ತು.

ಅಲ್ಲದೆ, ಅಕ್ಟೋಬರ್‌ನಲ್ಲಿ 26 ಬಾರಿ ವಿಪರೀತ ಮಳೆಯಾಗಿದೆ. 2020ರಲ್ಲಿ ಅದರ ಸಂಖ್ಯೆ 10 ಆಗಿತ್ತು. 2019 ರಲ್ಲಿ 16, 2018 ರಲ್ಲಿ 17 ಮತ್ತು 2017 ರಲ್ಲಿ 12 ಸಲ ಭಾರಿ ಮಳೆಯಾಗಿತ್ತು.

ADVERTISEMENT

ಈ ಅವಧಿಯಲ್ಲಿ ಎರಡು ಚಂಡಮಾರುತಗಳು ಸೇರಿದಂತೆ 9 ಬಾರಿ ವಾಯುಭಾರ ಕುಸಿತ ಉಂಟಾಗಿದೆ ಎಂದೂ ಹವಾಮಾನ ಇಲಾಖೆ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.