ADVERTISEMENT

ಚೀನಾದಿಂದಲೇ ಗಡಿಯಲ್ಲಿ ಹೆಚ್ಚಿನ ಯೋಧರ ನಿಯೋಜನೆ: ಭಾರತ ತಿರುಗೇಟು

ಡೆಕ್ಕನ್ ಹೆರಾಲ್ಡ್
Published 1 ಅಕ್ಟೋಬರ್ 2021, 2:41 IST
Last Updated 1 ಅಕ್ಟೋಬರ್ 2021, 2:41 IST
ಸಾಂದರ್ಭಿಕ ಚಿತ್ರ (ಐಸ್ಟಾಕ್ ಚಿತ್ರ)
ಸಾಂದರ್ಭಿಕ ಚಿತ್ರ (ಐಸ್ಟಾಕ್ ಚಿತ್ರ)   

ನವದೆಹಲಿ: ಚೀನಾವು ನೈಜ ನಿಯಂತ್ರಣ ರೇಖೆಯಾದ್ಯಂತ (ಎಲ್‌ಎಸಿ) ಹೆಚ್ಚಿನ ಸಂಖ್ಯೆಯಲ್ಲಿ ಯೋಧರನ್ನು ನಿಯೋಜಿಸುತ್ತಿದ್ದು, ಶಸ್ತ್ರಾಸ್ತ್ರಗಳ ಜಮಾವಣೆ ಮುಂದುವರಿಸಿದೆ. ಇದಕ್ಕೆ ಪ್ರತಿಯಾಗಿ ಭಾರತವೂ ಕ್ರಮ ಕೈಗೊಳ್ಳುತ್ತಿದೆಯಷ್ಟೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ತಿಳಿಸಿದೆ.

‘ಭಾರತೀಯ ಸೇನೆಯು ಎಲ್‌ಎಸಿಯಲ್ಲಿ ಮುನ್ನುಗ್ಗುವ ನೀತಿ ಅನುಸರಿಸುತ್ತಿದೆ. ನಮ್ಮ ಭೂಭಾಗವನ್ನು ಅತಿಕ್ರಮಿಸಿಕೊಳ್ಳುತ್ತಿದೆ’ ಎಂಬ ಚೀನಾದ ಆರೋಪವನ್ನು ಸಚಿವಾಲಯ ತಳ್ಳಿಹಾಕಿದೆ.

‘ಚೀನಾವು ಗಡಿ ಪ್ರದೇಶಗಳಲ್ಲಿ ನಿರಂತರವಾಗಿ ಯೋಧರ ನಿಯೋಜನೆ ಹೆಚ್ಚಿಸುತ್ತಿರುವುದಲ್ಲದೆ, ಶಸ್ತ್ರಾಸ್ತ್ರಗಳ ಜಮಾವಣೆಯನ್ನೂ ಮಾಡುತ್ತಿದೆ. ಇದಕ್ಕೆ ಪ್ರತಿಯಾಗಿ ನಮ್ಮ ಸೇನೆಯೂ ಯೋಧರ ನಿಯೋಜನೆ ಮಾಡುತ್ತಿದೆ. ಭಾರತದ ಭದ್ರತೆಯ ಹಿತದೃಷ್ಟಿಯನ್ನು ಗಮನದಲ್ಲಿಟ್ಟುಕೊಂಡು ಈ ಕ್ರಮ ಕೈಗೊಳ್ಳಲಾಗುತ್ತಿದೆ’ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ಅರಿಂದಮ್ ಬಗ್ಚಿ ತಿಳಿಸಿದ್ದಾರೆ.

ಭಾರತೀಯ ಸೇನೆಯು ಗಡಿಯಲ್ಲಿ ಅತಿಕ್ರಮಣಕಾರಿ ವರ್ತನೆ ತೋರುತ್ತಿದೆ ಎಂದು ಬುಧವಾರ ಚೀನಾ ಆರೋಪಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.