ADVERTISEMENT

ಮುಂದಿನ 15 ವರ್ಷದಲ್ಲಿ 100 ಉಪಗ್ರಹಗಳ ಉಡಾವಣೆ: ಜಿತೇಂದ್ರ ಸಿಂಗ್‌

ಪಿಟಿಐ
Published 23 ಆಗಸ್ಟ್ 2025, 15:48 IST
Last Updated 23 ಆಗಸ್ಟ್ 2025, 15:48 IST
ಜಿತೇಂದ್ರ ಸಿಂಗ್
ಜಿತೇಂದ್ರ ಸಿಂಗ್   

ನವದೆಹಲಿ: ಮುಂದಿನ 15 ವರ್ಷದಲ್ಲಿ 100 ಉಪಗ್ರಹಗಳನ್ನು ಉಡಾವಣೆ ಮಾಡಲು ಭಾರತ ಯೋಜಿಸಿದ್ದು, ಈ ಯೋಜನೆಯು ಸರ್ಕಾರಿ ತಂತ್ರಜ್ಞಾನ ಕಾರ್ಯಾಚರಣೆ ಹಾಗೂ ಖಾಸಗಿ ನೇತೃತ್ವದ ಕಾರ್ಯಾಚರಣೆಯ ಸಹಭಾಗಿತ್ವದಲ್ಲಿ ಅನುಷ್ಠಾನಕ್ಕೆ ಬರಲಿದೆ ಎಂದು ಕೇಂದ್ರ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಜಿತೇಂದ್ರ ಸಿಂಗ್‌ ಭಾನುವಾರ ಹೇಳಿದ್ದಾರೆ. 

ರಾಷ್ಟ್ರೀಯ ಬಾಹ್ಯಾಕಾಶ ದಿನಾಚರಣೆ ವೇಳೆ ಇಸ್ರೊ ಮುಖ್ಯಸ್ಥ ವಿ.ನಾರಾಯಣನ್‌ ಅವರ ಸಮ್ಮುಖದಲ್ಲಿ ಮುಂದಿನ 15 ವರ್ಷಗಳ ಬಾಹ್ಯಾಕಾಶ ಕಾರ್ಯಾಚರಣೆಗೆ ಸಂಬಂಧಿಸಿದ ನೀಲನಕ್ಷೆಯನ್ನು ಬಿಡುಗಡೆಗೊಳಿಸಿದ ಜಿತೇಂದ್ರ ಈ ಹೇಳಿಕೆ ನೀಡಿದ್ದಾರೆ. 

ಅಲ್ಲದೇ, 2040ರವರೆಗೆ ಹಾಗೂ ಆನಂತರದ ಭಾರತದ ಬಾಹ್ಯಾಕಾಶ ಕಾರ್ಯಾಚರಣೆಗಳಿಗೆ ಈ ನೀಲನಕ್ಷೆ ಮಾರ್ಗದರ್ಶನ ಒದಗಿಸಲಿದೆ ಎಂದೂ ಪ್ರತಿಪಾದಿಸಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.